alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳತನಕ್ಕಿಳಿದಿದ್ದ ತೆಲುಗು ಚಿತ್ರನಟ ಅರೆಸ್ಟ್

ಹೈದ್ರಾಬಾದ್: ಚಿತ್ರ ತೋಪೆದ್ದ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನಟನೊಬ್ಬ ಕಳ್ಳತನಕ್ಕೆ ಇಳಿದು ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಚಿತ್ರರಂಗದ ಗೀಳೇ ಹಾಗೆ ಅದೊಂದು ಮಾಯಾಲೋಕ. ಕೈಯಲ್ಲಿ ಕಾಸಿಲ್ಲ ಅಂದ್ರು ತಾನೊಂದು ಫಿಲ್ಮ್ ತೆಗೆದು, ದೊಡ್ಡ ಹೀರೋ ಆಗಬೇಕೆಂಬ ಮಹದಾಸೆಯಿಂದ ಚಿತ್ರರಂಗಕ್ಕೆ ಧುಮುಕುವ ಹಲವರ ಬದುಕು ಮೂರಾಬಟ್ಟೆಯಾಗಿರುವ ಉದಾಹರಣೆಗಳೆಷ್ಟೋ….ತೆಲುಗಿನ ನಿವಿರು ಚಿತ್ರದ ಮಹೇಶ್ ಕಥೆಯೂ ಅದೇ. ಮಹೇಶ್ ಈ ಚಿತ್ರವನ್ನು ನಟಿಸಿ, ನಿರ್ಮಿಸಿದ್ದ. ಆದರೆ ಚಿತ್ರ ಫ್ಲಾಪ್ ಆಗಿತ್ತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಹೇಶ್ ಕಳ್ಳತನದ ಹಾದಿ ಹಿಡಿದ. ಇದಕ್ಕೆ ವಿಕ್ಕಿ ಎಂಬಾತ ಸಾಥ್ ನೀಡಿದ್ದಾನೆ.

ಹೀಗೇ ಕಳ್ಳತನಕ್ಕಿಳಿದ ನಟ ಈಗ ಪೊಲೀಸರ ಅತಿಥಿ. ಮಹೇಶ್ ಹಗಲಿನಲ್ಲಿ ಕೇಬಲ್ ಆಪರೇಟರ್ ಸೋಗಿನಲ್ಲಿ ಮನೆಗಳನ್ನು ಸುತ್ತಾಡುತ್ತಿದ್ದ. ರಾತ್ರಿ ಆಗುತ್ತಿದ್ದಂತೆ ಕಳ್ಳತನ ಮಾಡುತ್ತಿದ್ದ. ಹೀಗೆ 15 ಲಕ್ಷ ಮೌಲ್ಯದ 50 ತೊಲ ಬಂಗಾರ, 30 ತೊಲ ಬೆಳ್ಳಿ ಹಾಗೂ 3 ಸಾವಿರ ರೂಪಾಯಿ ನಗದನ್ನು ದೋಚಿರುವ ಇಬ್ಬರನ್ನೂ ಜುಬಿಲಿ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...