alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ‘ಟೈಗರ್’

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಅಭಿನಯದ ‘ಟೈಗರ್ ಜಿಂದಾ ಹೈ’ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಸಲ್ಮಾನ್ ಖಾನ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ್ ಆಗಿದ್ದಾರೆ.

ಮೊದಲ ವಾರ 206.04 ಕೋಟಿ ರೂ., 2 ನೇ ವಾರ 85.51 ಕೋಟಿ ರೂ., 3 ನೇ ವಾರಾಂತ್ಯಕ್ಕೆ 17.61 ಕೋಟಿ ರೂ. ಗಳಿಸಿದೆ.

ದೇಶೀಯವಾಗಿ 311. 88 ಕೋಟಿ ರೂ. ಗಳಿಸಿರುವ ‘ಟೈಗರ್ ಜಿಂದಾ ಹೈ’ ವಿಶ್ವದಾದ್ಯಂತ 427.55 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣ್ತಿದೆ.

ಅತಿಹೆಚ್ಚು ಗಳಿಕೆ ಕಂಡ ಸಲ್ಮಾನ್ ಖಾನ್ ಚಿತ್ರಗಳಲ್ಲಿ ‘ಟೈಗರ್ ಜಿಂದಾ ಹೈ’ ಕೂಡ ಒಂದಾಗಿದೆ. ಸಲ್ಮಾನ್ ಅಭಿನಯದ 12 ಚಿತ್ರಗಳು 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿವೆ.

2017 ರಲ್ಲಿ ಅತಿಹೆಚ್ಚು ಗಳಿಕೆ ಕಂಡ ಮತ್ತು ಭಾನುವಾರ ಒಂದೇ ದಿನದಲ್ಲಿ 45.53 ಕೋಟಿ ರೂ. ಗಳಿಸಿದ ಚಿತ್ರ ಇದಾಗಿದೆ. ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ದೇಶಿಸಿದ್ದು, ಸಲ್ಮಾನ್ ಖಾನ್, ಕತ್ರಿನಾ ಕೈಫ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...