alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕಷ್ಟಕ್ಕೆ ಸಿಲುಕಿದ್ಲು ಖ್ಯಾತ ಬಾಲಿವುಡ್ ನಟನ ಪತ್ನಿ

ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸೆಲೆಬ್ರಿಟಿ ವಕೀಲ ರಿಜ್ವಾನ್ ಸಿದ್ದಿಕಿ ಬಂಧನದ ಬಳಿಕ ಈ ಕೇಸ್ ಗೆ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ನಟಿ ಕಂಗನಾ ರನಾವತ್ ಹೆಸರು ಕೂಡ ಕೇಳಿ ಬಂದಿದೆ. ವಕೀಲ ರಿಜ್ವಾನ್ ಗೆ ಕಂಗನಾ, ಹೃತಿಕ್ ರೋಷನ್ ಮೊಬೈಲ್ ನಂಬರ್ ಫಾರ್ವರ್ಡ್ ಮಾಡಿದ್ದರಂತೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ನಟ ನವಾಜುದ್ದೀನ್ ಸಿದ್ದಿಕಿ ಪತ್ನಿಯ ಫೋನ್ ದಾಖಲೆಗಳ ಮೇಲೆ ಕಳ್ಳಗಿವಿಯಿಟ್ಟ ಆರೋಪದ ಮೇಲೆ ವಕೀಲ ರಿಜ್ವಾನ್ ರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಜಾಕಿಶ್ರಾಫ್ ಪತ್ನಿ ಆಯೇಶಾ ಹೆಸರು ಕೂಡ ಕೇಳಿಬಂದಿದ್ದು, ಆಕೆಗೆ ಥಾಣೆ ಪೊಲೀಸರು ಸಮನ್ಸ್ ನೀಡಿದ್ದಾರೆ.

ನಟ ಸಾಹಿಲ್ ರ ಕಾಲ್ ರೆಕಾರ್ಡ್ಸ್ ಡಿಟೇಲ್ ಪಡೆದು ಅದನ್ನು ವಕೀಲ ರಿಜ್ವಾನ್ ಗೆ ಆಯೇಶಾ ನೀಡಿದ್ದರಂತೆ. ಈ ಹಿಂದೆ ಕೂಡ ಸಾಹಿಲ್ ಹಾಗೂ ಆಯೇಶಾ ಮಧ್ಯೆ ಕಾನೂನು ಜಟಾಪಟಿ ನಡೆದಿತ್ತು. 5 ಕೋಟಿ ರೂಪಾಯಿ ವಾಪಸ್ ಮಾಡಿಲ್ಲವೆಂದು ಆರೋಪಿಸಿದ್ದ ಆಯೇಶಾ, ಸಾಹಿಲ್ ವಿರುದ್ಧ ಕೇಸ್ ದಾಖಲಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...