alex Certify
ಕನ್ನಡ ದುನಿಯಾ       Mobile App
       

Kannada Duniya

ಶುರುವಾಯ್ತು ‘ಯು ಟರ್ನ್’ ಬೆಡಗಿಯ ಬಾಲಿವುಡ್ ಚಿತ್ರ

‘ಯು ಟರ್ನ್’ ಖ್ಯಾತಿಯ ನಟಿ ಶ್ರದ್ಧಾ ಶ್ರೀನಾಥ್ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ.

ಶ್ರದ್ಧಾ ಶ್ರೀನಾಥ್ ಅಭಿನಯದ ಬಾಲಿವುಡ್ ಚಿತ್ರ ‘ಮಿಲನ್ ಟಾಕೀಸ್’ ಚಿತ್ರೀಕರಣ ಲಖ್ನೋದಲ್ಲಿ ಆರಂಭವಾಗಿದೆ. ಫಿಲ್ಮಿ ಕೀಡಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗ್ತಿದೆ. ಚತ್ವಾಲ ನಿರ್ಮಾಣ ಮಾಡಿರುವ ಚಿತ್ರವನ್ನು ತಿಗಮಾನ್ಷು ದುಲಿಯಾ ನಿರ್ದೇಶಿಸಿದ್ದಾರೆ.

ಅಲಿ ಫಜಲ್, ಶ್ರದ್ಧಾ ಶ್ರೀನಾಥ್, ರಿಚಾ ಸಿನ್ಹಾ, ದೀಪ್ ರಾಜ್ ರಾಣಾ, ಅಶುತೋಷ್ ರಾಣಾ, ಸಂಜಯ್ ಮಿಶ್ರಾ, ಯಶ್ ಪಾಲ್ ಶರ್ಮಾ ಮೊದಲಾದವರು ಅಭಿನಯಿಸಿದ್ದಾರೆ.

ಪ್ರೇಕ್ಷಕರಿಗೆ ಹೊಸ ಕತೆಯನ್ನು ಹೇಳಲು ನಾನು ಉತ್ಸುಕನಾಗಿದ್ದೇನೆ ಎಂದು ಕತೆ, ಚಿತ್ರಕತೆ ಸಂಭಾಷಣೆ ಬರೆದಿರುವ ನಿರ್ದೇಶಕ ದುಲಿಯಾ ಹೇಳಿದ್ದಾರೆ. ತವರು ನೆಲದಲ್ಲಿ ಚಿತ್ರೀಕರಣ ನಡೆಯುತ್ತಿರುವುದು ಖುಷಿಯಾಗಿದೆ ಎಂದು ಅಲಿ ಫಜಲ್ ತಿಳಿಸಿದ್ದಾರೆ. ಶ್ರದ್ಧಾ ಶ್ರೀನಾಥ್ ಕೂಡ ಚಿತ್ರದ ಕುರಿತಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...