alex Certify
ಕನ್ನಡ ದುನಿಯಾ       Mobile App
       

Kannada Duniya

ಹೆತ್ತವರನ್ನು ಒಪ್ಪಿಸಲು ಶಾರುಕ್ ಗೆ ಗೌರಿ ಇಟ್ಟ ಹೆಸರೇನು?

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಮಡದಿ ಗೌರಿ ಖಾನ್ ಗೆ ಇಂದು 48ರ ಹರೆಯ. ಇಷ್ಟು ವರ್ಷ ಉರುಳಿದರೂ, ಚಿತ್ರ ಜಗತ್ತನ್ನೇ ಆಳಿದರೂ ಶಾರುಕ್ ಪ್ರೀತಿ ಮಾತ್ರ ಅಂದಿನಂತೆಯೇ ಇದೆ ಎನ್ನುತ್ತಾಳೆ ಗೌರಿ.

ಅದು ಜನರಿಗೂ ಗೊತ್ತು. ಉಳಿದ ಖಾನ್ ಗಳೂ ಸೇರಿದಂತೆ ಬಾಲಿವುಡ್ ತಾರೆಗಳ ಅವಾಂತರಗಳ ನಡುವೆ ಶಾರುಕ್ ಖಾನ್ ಜನರ ಮನಸ್ಸಿನಲ್ಲಿ ನೆಲೆ ನಿಂತಿರುವುದು ಕೇವಲ ಆತನ ನಟನೆಗೆ ಮಾತ್ರವಲ್ಲ. ಗೌರಿಯ ಬಗೆಗಿನ ಆತನ ಅದಮ್ಯ ಪ್ರೀತಿಗೂ ಕೂಡ. ಯಶಸ್ಸೆಂಬುದು ತನ್ನೆದುರು ಅಂಗಾತ ಮಲಗಿದ್ದರೂ ಗೌರಿ ಮೇಲೆ ತನ್ನ ಜೀವವನ್ನೇ ಇಟ್ಟಿದ್ದಾನೆ ಶಾರುಕ್. ಈತ ಆದರ್ಶ ಪತಿ ಎಂಬುದು ಇಂದು ಪ್ರಪಂಚಕ್ಕೆ ತಿಳಿದಿದ್ದರೂ ಶಾರುಕ್ ತನ್ನ ಸರಿಯಾದ ಆಯ್ಕೆ ಎಂದು ತನ್ನ ಹೆತ್ತವರಿಗೆ ತಿಳಿಸಲು ಗೌರಿ ಅದೇನೆಲ್ಲಾ ಸರ್ಕಸ್ ಮಾಡಿದ್ದಾರೆ ಗೊತ್ತಾ?

ಹಿಂದೂ ಹುಡುಗಿ ಗೌರಿ, ಮುಸ್ಲಿಂ ಹುಡುಗನನ್ನು ಮದುವೆ ಆಗುತ್ತೇನೆಂದು ಹೇಳಿದ್ದರೆ ಮನೆಯಲ್ಲಿ ಒಪ್ಪುವ ಯಾವ ಸಾಧ್ಯತೆಯೂ ಇರಲಿಲ್ಲ. ಹೀಗಾಗಿ ಶಾರುಕ್ ಅನ್ನು ಗೌರಿ ತನ್ನ ತಂದೆ-ತಾಯಿಗೆ ‘ಅಭಿನವ್’ ಎಂಬುದಾಗಿ ಪರಿಚಯಿಸಿದ್ದಳಂತೆ. ಇನ್ನು ಶಾರುಕ್ ನಟನೆ ಬಗ್ಗೆ ಕೇಳಬೇಕಾ? ಆತನ ಮಾತಿನ ಮೋಡಿಗೆ ಅವರೂ ನಂಬಿದ್ದರು. ಆದರೆ ಯಾವಾಗ ವಿಷಯ ತಿಳಿಯಿತೋ ಆಗ ವಿರೋಧ ವ್ಯಕ್ತವಾಯಿತು. ಯಾರನ್ನೂ ಕೇರ್ ಮಾಡದ ಇಬ್ಬರೂ ತಮ್ಮಿಷ್ಟದಂತೆ ವಿವಾಹವಾದರು. ಅದಾಗಿ ಮುಂಬೈಗೆ ಬಂದ ಪ್ರಾರಂಭದ ದಿನಗಳು ಬಹಳ ಕಷ್ಟಕರವಾಗಿದ್ದವು ಎಂದು ನೆನಪಿಸಿಕೊಳ್ಳುತ್ತಾಳೆ ಗೌರಿ. ಶಾರುಕ್ ಒಮ್ಮೆ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನೋಡಿ…… ಮುಂದಿನದು ಹೇಳಬೇಕಾಗಿಲ್ಲ. ಇಂದಿಗೂ ಶಾರುಕ್ ನ ಬ್ಲಾಕ್ ಬ್ಲಸ್ಟರ್ ಮೂವಿಗಳ ರೋಮ್ಯಾಂಟಿಕ್ ಲವ್ ಸ್ಟೋರಿಗಳಿಗಿಂತ ಆತನ ಬದುಕಿನ ಸ್ಟೋರಿಯೇ ರೋಚಕವಾಗಿದೆ. ಅಲ್ವಾ?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...