alex Certify
ಕನ್ನಡ ದುನಿಯಾ       Mobile App
       

Kannada Duniya

‘ಪ್ರೇಮಿಗಳ ದಿನ’ ಕ್ಕೂ ಮುನ್ನವೇ ಹುಚ್ಚೆಬ್ಬಿಸಿದೆ ಈ ಲವ್ ಸಾಂಗ್

ಫೆಬ್ರವರಿ 14 ಸಮೀಪಿಸುತ್ತಿರುವಂತೆಯೇ ಪ್ರೇಮಿಗಳು ಇದರ ಆಚರಣೆಗಾಗಿ ಪ್ಲಾನ್ ಮಾಡತೊಡಗಿದ್ದಾರೆ. ‘ಪ್ರೇಮಿಗಳ ದಿನಾಚರಣೆ’ ಗೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದರ ನಡುವೆಯೂ ಪ್ರೀತಿಪಾತ್ರರಿಗಾಗಿ ಗಿಫ್ಟ್ ಗಳ ಖರೀದಿ ಭರಾಟೆ ಆರಂಭವಾಗಿದೆ.

ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಆನ್ ಲೈನ್ ಶಾಪಿಂಗ್ ತಾಣಗಳು ಹಲವು ಆಫರ್ ನೀಡುತ್ತಿದ್ದು, ವಹಿವಾಟೂ ಜೋರಾಗಿದೆ. ಇದರ ಮಧ್ಯೆ ಮಲೆಯಾಳಂ ಚಿತ್ರವೊಂದರ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹುಡುಗ-ಹುಡುಗಿ ಕಣ್ಣುಗಳಲ್ಲೇ ತಮ್ಮ ಭಾವನೆಗಳನ್ನು ಇದರಲ್ಲಿ ವ್ಯಕ್ತಪಡಿಸುತ್ತಿದ್ದು, ಈಗಾಗಲೇ ಸಹಸ್ರಾರು ಮಂದಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಮಲಯಾಳಂನ Oru Adaar Love ಚಿತ್ರದ Manikya Malaraya Poovi ಹಾಡಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಬ್ಬರು ಪರಸ್ಪರ ಆಕರ್ಷಣೆಯನ್ನು ಕಣ್ಣು ಹಾಗೂ ಹುಬ್ಬುಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದು, ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನು ನೀವೂ ನೋಡಿ ಎಂಜಾಯ್ ಮಾಡಿ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...