alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕಾ ಚೋಪ್ರಾಳಂತೆ ಕಾಣ್ತಾಳೆ ಈ ಪಾಕ್ ನಟಿ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಳ ತದ್ರೂಪಿಯೊಬ್ಬಳು ಪತ್ತೆಯಾಗಿದ್ದಾಳೆ. ಪಾಕಿಸ್ತಾನದ ರೂಪದರ್ಶಿ ಹಾಗೂ ನಟಿ ಝಾಲೆ ಸರ್ಹದಿ ಥೇಟ್ ಪ್ರಿಯಾಂಕಾರಂತೆ ಕಾಣ್ತಾಳೆ.

ಅವಳ ಫೋಟೋಗಳನ್ನು ನೋಡಿದವರು ಅರೆಕ್ಷಣ ಪ್ರಿಯಾಂಕಾ ಚೋಪ್ರಾ ಅಂತಾ ಕನ್ಫ್ಯೂಸ್ ಆಗ್ತಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತನ್ನನ್ನು ಎಲ್ಲರೂ ಪ್ರಿಯಾಂಕಾಗೆ ಹೋಲಿಸ್ತಾರೆ ಅಂತಾ ಝಾಲೆ ಸರ್ಹದಿ ಹೇಳಿಕೊಂಡಿದ್ದಾಳೆ.

ಪ್ರಿಯಾಂಕಾ ಚೋಪ್ರಾ 2000ನೇ ಇಸ್ವಿಯಲ್ಲಿ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ರು, ಅದೇ ವರ್ಷ ಭಾರತದ ಚಾನೆಲ್ ಗಳಿಗೆ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿತ್ತು. ಅದೇ ಸಮಯದಲ್ಲಿ ಝಾಲೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಳಂತೆ.

ಕಾರ್ಯಕ್ರಮವೊಂದನ್ನು ಹೋಸ್ಟ್ ಮಾಡಿದ್ದ ಝಾಲೆಯನ್ನು ನೋಡಿ ಎಲ್ಲರೂ ಪ್ರಿಯಾಂಕಾ ಚೋಪ್ರಾ ಎಂದುಕೊಂಡಿದ್ದರಂತೆ. ಆಗಿನಿಂದ್ಲೂ ಈ ಮಾಡೆಲ್ ಅನ್ನು ಜನ ಪ್ರಿಯಾಂಕಾ ಅಂತಾನೇ ಗುರುತಿಸ್ತಾರೆ.

ತನ್ನನ್ನು ಪ್ರಿಯಾಂಕಾ ಚೋಪ್ರಾಗೆ ಹೋಲಿಸಿದ್ದಕ್ಕೆ ಪಾಕ್ ನಟಿಗೇನೂ ಬೇಸರವಿಲ್ಲ. ಯಾಕಂದ್ರೆ ಪ್ರಿಯಾಂಕಾ ಭಾರತದಲ್ಲಿ ದೇಸಿ ಗರ್ಲ್ ಅಂತಾನೇ ಹೆಸರು ಮಾಡಿರೋ ನಟಿ. ಈಗಂತೂ ಹಾಲಿವುಡ್ ನಲ್ಲೂ ಸಾಕಷ್ಟು ಫೇಮಸ್ ಆಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...