alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೇ ನಿಲ್ದಾಣದಲ್ಲಿ ಹಾಡು ಹೇಳಿದವನೀಗ ಫುಲ್ ಫೇಮಸ್

man-singing-on-railway-station_65

ಸಾಮಾಜಿಕ ಜಾಲತಾಣಗಳ ಮೂಲಕ ಆನೇಕ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಪ್ರತಿಭೆಯಿದ್ದರೂ ಅವಕಾಶ ಸಿಗದ ಕಾರಣಕ್ಕೆ ತೆರೆಮರೆಯಲ್ಲಿದ್ದವರಿಗೆ ಜಾಲತಾಣಗಳು ವೇದಿಕೆ ಒದಗಿಸುತ್ತಿವೆಯಲ್ಲದೆ ಅಂತವರಿಗೆ ಅವಕಾಶಗಳು ಅರಸಿಕೊಂಡು ಬರಲು ಕಾರಣವಾಗುತ್ತಿವೆ.

ಹೀಗೆ ಅದ್ಬುತ ಕಂಠ ಸಿರಿ ಹೊಂದಿದ್ದ ಗಾಯಕನೊಬ್ಬ ರೈಲು ನಿಲ್ದಾಣದಲ್ಲಿ ಹಾಡಿದ ಹಾಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆತನ ಪ್ರತಿಭೆಗೆ ಎಲ್ಲರೂ ತಲೆದೂಗುತ್ತಿದ್ದಾರೆ. ಜೂನ್ 21 ರಂದು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಆಗಿರುವ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ನೇಹಿತರೊಂದಿಗೆ ಪಶ್ಚಿಮ ಬಂಗಾಳದ ಅಸಾನ್ಸಾಲ್ ನಿಂದ ಉತ್ತರಾಕಾಂಡ್ ನ ಹಲ್ದವಾನಿಗೆ ರೈಲಿನಲ್ಲಿ ತೆರಳುತ್ತಿದ್ದ ಸೌವಿಕ್ ಮುಖ್ಯೋಪಾಧ್ಯಾಯ ಎಂಬವರು ಮಾರ್ಗ ಮಧ್ಯದಲ್ಲಿ ರೈಲು ನಿಂತಾಗ ಸ್ನೇಹಿತರ ಒತ್ತಡಕ್ಕೆ ಮಣಿದು ಕೆಲ ಹಾಡುಗಳನ್ನು ಹಾಡಿದ್ದಾರೆ. ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸುಶೀಲ್ ಸಿಂಗ್ ಎಂಬ ಮತ್ತೊಬ್ಬ ಪ್ರಯಾಣಿಕ, ಸೌವಿಕ್ ಗೆ ಗೊತ್ತಿಲ್ಲದಂತೆ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ಈಗ ವೈರಲ್ ಆಗಿದ್ದು, ಸೌವಿಕ್ ನಂತಹ ಪ್ರತಿಭೆಗಳಿಗೆ ಚಿತ್ರರಂಗದಲ್ಲಿ ಅವಕಾಶ ಸಿಗಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ತಾವು ಹಾಡುವ ವಿಡಿಯೋ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಆಗಿರುವ ವಿಚಾರವೇ ಸೌವಿಕ್ ಗೆ ಗೊತ್ತಿರಲಿಲ್ಲವೆನ್ನಲಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಸೌವಿಕ್ ತನ್ನ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿರುವವರಿಗೆ ಧನ್ಯವಾದ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...