alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕಾ-ಜೋನಸ್ ರ ಗಳಿಕೆ ಕೇಳಿದ್ರೆ ಬೆರಗಾಗ್ತೀರಿ…!

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ  ಹಾಡುಗಾರ ನಿಕ್ ಜೋನಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಷ್ಯವನ್ನು ಅಮೆರಿಕಾ ಮಾಧ್ಯಮಗಳು ದೃಢಪಡಿಸಿವೆ. ಮುಂದಿನ ತಿಂಗಳು ಇಬ್ಬರೂ ಮದುವೆಯಾಗಲಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಭಾರತ್ ಚಿತ್ರದ ನಿರ್ದೇಶಕ ಅಲಿ ಅಬ್ಬಾಸ್ ಕೂಡ ಸೂಚನೆ ನೀಡಿದ್ದರು. ಟ್ವೀಟರ್ ಮಾಡಿದ್ದ ಅಲಿ ಅಬ್ಬಾಸ್ ಬಹಳ ವಿಶೇಷ ಕಾರಣಕ್ಕೆ ಅವ್ರು ಭಾರತ್ ತಂಡದಿಂದ ಹೊರಬಿದ್ದಿದ್ದಾರೆ ಎಂದಿದ್ದರು.

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ತಮ್ಮ ಕ್ಷೇತ್ರದಲ್ಲಿ ನಾಯಕರುಗಳಾಗಿದ್ದಾರೆ. ಇದ್ರಲ್ಲಿ ಯಾವುದೇ ಸಂಶಯವಿಲ್ಲ. ಫೋರ್ಬ್ಸ್ ವರದಿ ಇವರಿಬ್ಬರ ಮೌಲ್ಯವನ್ನು ಹೇಳ್ತಿದೆ. ವಿಶ್ವದ ಪ್ರಸಿದ್ಧ ಮಹಿಳೆಯರು ಪಟ್ಟಿಯಲ್ಲಿ ಪ್ರಿಯಾಂಕ 97ನೇ ಸ್ಥಾನದಲ್ಲಿದ್ದಾರೆ. ನವೆಂಬರ್ 2017ರ ವರದಿ ಪ್ರಕಾರ, ಜೂನ್ 1,2017ವರೆಗೆ ಪ್ರಿಯಾಂಕ ಗಳಿಕೆ 10 ಮಿಲಿಯನ್ ಡಾಲರ್ (64 ಕೋಟಿ ರೂ.).

ಇನ್ನು ನಿಕ್ ಜೋನಸ್ ನಿವ್ವಳ ಮೌಲ್ಯ  25 ಮಿಲಿಯನ್ ಡಾಲರ್ (171 ಕೋಟಿ ರೂ.)ಈ ವರದಿ ಎರಡು ತಿಂಗಳ ಹಳೆಯದು. ಆ ನಂತ್ರ ನಿಕ್ ದೊಡ್ಡ ಪ್ರಾಜೆಕ್ಟ್ ಗೆ ಕೈ ಹಾಕಿಲ್ಲ. ಸಂದರ್ಶನ ಒಂದರಲ್ಲಿ ಮಾತನಾಡಿದ ಪ್ರಿಯಾಂಕ, ನಾವಿಬ್ಬರೂ ಒಂದೇ ಮಟ್ಟದಲ್ಲಿದ್ದೇವೆ. ಈಗಾಗಲೇ ನಾವಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡಿದ್ದೇವೆ ಎಂದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...