alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ತಮನ್ನಾರ ಬ್ಯೂಟಿ ಸೀಕ್ರೆಟ್

ಬಾಹುಬಲಿ ಚಿತ್ರದ ಮೂಲಕ ಮಿಲ್ಕಿ ಬ್ಯೂಟಿ ತಮನ್ನಾ ಈಗ ಮನೆಮಾತಾಗಿದ್ದಾರೆ. ಹಲವು ಹಿಂದಿ ಚಿತ್ರಗಳಲ್ಲೂ ನಟಿಸಿರೋ ತಮನ್ನಾ ಸೌಂದರ್ಯಕ್ಕೆ ಮತ್ತೊಂದು ಹೆಸರು ಅಂದ್ರೂ ತಪ್ಪೇನಿಲ್ಲ. ಹೊಳೆಯುವ ಚರ್ಮ, ಸುಂದರ ಮೈಮಾಟ ಅವರನ್ನು ಚೆಲುವೆಯರ ಸಾಲಲ್ಲಿ ನಿಲ್ಲಿಸಿದೆ.

ಅಷ್ಟಕ್ಕೂ ತಮನ್ನಾಳ ಈ ಸೌಂದರ್ಯದ ಗುಟ್ಟೇನು ಗೊತ್ತಾ? ಆಕೆ ಸೇವಿಸುವ ಆಹಾರ. ಬೆಳಗ್ಗೆ ಪ್ರತಿನಿತ್ಯ ಕುಡಿಯೋ ಒಂದು ಮ್ಯಾಜಿಕ್ ಡ್ರಿಂಕ್. ಅದರ ಹೆಸರು ಬುಲೆಟ್ ಪ್ರೂಫ್ ಕಾಫಿ ಅಥವಾ ಬಟರ್ ಕಾಫಿ. ಅದು ತಮಗೆ ಯಾಕಿಷ್ಟ ಅನ್ನೋದನ್ನು ಕೂಡ ತಮನ್ನಾ ಇನ್ ಸ್ಟಾಗ್ರಾಮ್ನಲ್ಲಿ ವಿವರಿಸಿದ್ದಾರೆ.

ಪ್ರತಿದಿನ ಬೆಳಗ್ಗೆ ಬಟರ್ ಕಾಫಿ ಕುಡಿಯೋ ಮೂಲಕ ತಮನ್ನಾ ದೇಹದ ಕೊಬ್ಬನ್ನೆಲ್ಲ ಕರಗಿಸ್ತಾರಂತೆ. ಅಷ್ಟೇ ಅಲ್ಲ ದಿನವಿಡೀ ಫ್ರೆಶ್ ಆಗಿರಲು ಇದು ಸಹಕಾರಿ ಎನ್ನುತ್ತಾರೆ. ಬಟರ್ ಕಾಫಿ ಮಾಡೋದು ಹೇಗೆ ಅನ್ನೋದಕ್ಕೂ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ತಮನ್ನಾ.

ಬಟರ್ ಕಾಫಿ ಎನರ್ಜಿ ಬೂಸ್ಟರ್ ಅಂತೆ. ಒಂದು ಕಪ್ ಬ್ಲಾಕ್ ಕಾಫಿಗೆ ಒಂದು ಚಮಚ ಬೆಣ್ಣೆ ಹಾಕಿ ಮಿಕ್ಸಿ ಮಾಡಿಕೊಂಡು ಕುಡಿಯಬಹುದು. ಹೀಗೆ ಮಾಡೋದ್ರಿಂದ ದೇಹದ ತೂಕ ಇಳಿಸಬಹುದು ಅನ್ನೋದು ತಮನ್ನಾರ ಟಿಪ್ಸ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...