alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿಯ ಸೀರೆಯನ್ನು ಐರನ್ ಮಾಡಿದ್ದವ ಇಂದು ಸ್ಟಾರ್ ಡೈರೆಕ್ಟರ್…!

ಬಣ್ಣದ ಲೋಕವೆಂದ್ರೆ ನಿಂತ ನೀರಲ್ಲ. ಬದಲಾವಣೆ ಅದರ ಮೂಲ ಗುಣ. ಮೇಲಿದ್ದವರು ಯಾವಾಗ ಬೇಕಾದರೂ ಕೆಳಗಿಳಿಯಬಹುದು. ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡಿದ್ದವರು ದಿನ ಬೆಳಗಾಗೋದ್ರಲ್ಲಿ ಸ್ಟಾರ್ ಆಗಬಹುದು.

ಹೌದು, ಬಾಲಿವುಡ್ ನಲ್ಲಿ ಸಾಕಷ್ಟು ಬ್ಲಾಕ್ ಬ್ಲಸ್ಟರ್ ಸಿನೆಮಾಗಳನ್ನು ನೀಡಿರೋ ರೋಹಿತ್ ಶೆಟ್ಟಿ ಹೆಸರನ್ನು ನೀವು ಕೇಳಿರಲೇ ಬೇಕು. ಇತ್ತೀಚಿನ ಹಿಟ್ ಮೂವಿಗಳಾದ ಚೆನ್ನೈ ಎಕ್ಸ್ ಪ್ರೆಸ್, ದಿಲ್ ವಾಲೆ, ಗೋಲ್ ಮಾಲ್ ಸಿರೀಸ್ ನಂತಹ ಸಿನೆಮಾಗಳನ್ನು ಡೈರೆಕ್ಟ್ ಮಾಡಿರೋ ರೋಹಿತ್ ಶೆಟ್ಟಿ ಮೊದಲು ಎಷ್ಟು ಕಷ್ಟಪಟ್ಟಿದ್ದರು, ಯಾವೆಲ್ಲ ಚಿಕ್ಕ ಚಿಕ್ಕ ಕೆಲಸ ಮಾಡಿದ್ದರು ಅನ್ನೋದನ್ನು ಕೇಳಿದ್ರೆ ನಿಮಗೆ ಖಂಡಿತಾ ಆಶ್ಚರ್ಯ ಆಗುತ್ತೆ.

ರೋಹಿತ್ ಮೊದಲು ಕೆಲಸ ಮಾಡಿದ್ದು ಸ್ಪಾಟ್ ಬಾಯ್ ಆಗಿ ಅಂದ್ರೆ ನೀವು ನಂಬಲೇ ಬೇಕು. ಅಲ್ಲದೇ 1995 ನಲ್ಲಿ ರೋಹಿತ್ ಶೆಟ್ಟಿ ನಟಿ ಟಬು ಸೀರೆಯನ್ನು ಇಸ್ತ್ರಿ ಮಾಡುವ ಕೆಲಸ ಕೂಡ ಮಾಡಿದ್ದರು. ನಂತರ ಅದೇ ಟಬು, ರೋಹಿತ್ ಶೆಟ್ಟಿ ನಿರ್ದೇಶನದ ಗೋಲ್ ಮಾಲ್ ನಂತಹ ಬ್ಲಾಕ್ ಬಸ್ಟರ್ ಸಿನೆಮಾಗಳಲ್ಲಿ ನಟಿಸಿದ್ದಾರೆ.

ಇನ್ನು ಇದೇ ರೋಹಿತ್ ಶೆಟ್ಟಿ, ನಟಿ ಕಾಜೋಲ್ ಹಾಗೂ ಶಾರುಖ್ ಖಾನ್ ಅಭಿನಯದ ದಿಲ್ ವಾಲೆ ಚಿತ್ರ ಡೈರೆಕ್ಟ್ ಮಾಡಿದ್ದು ಅದು ಬಿಗ್ ಸಕ್ಸಸ್ ಕಂಡಿದೆ. ಆದ್ರೆ ಅದೇ ಕಾಜೋಲ್ ಗೆ 90ರ ದಶಕದಲ್ಲಿ ರೋಹಿತ್ ಟಚ್ ಅಪ್ ಮಾಡಿದ್ರು ಅನ್ನೋದು ಬಹುತೇಕರಿಗೆ ಗೊತ್ತೇ ಇಲ್ಲ. ಆದ್ರೆ ಅದೇ ರೋಹಿತ್ ಶೆಟ್ಟಿ ಇಂದು ಸಕ್ಸಸ್ ಫುಲ್ ಸ್ಟಾರ್ ನಿರ್ದೇಶಕ. ಹೀಗೆ ಚಿತ್ರ ಲೋಕದಲ್ಲಿ ಛಲದ ಜೊತೆಗೆ ಅದೃಷ್ಟ ಸೇರಿಬಿಟ್ಟರೆ ಯಶಸ್ಸಿನ ಉತ್ತುಂಗ ಸೇರೋದ್ರಲ್ಲಿ ಡೌಟೇ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...