alex Certify
ಕನ್ನಡ ದುನಿಯಾ       Mobile App
       

Kannada Duniya

ರಣವೀರ್ – ದೀಪಿಕಾ ಜೋಡಿಯ ಏರ್ಪೋರ್ಟ್ ವಿಡಿಯೋ ”ವೈರಲ್”

ಇದೇ ನವೆಂಬರ್ 14-15 ಕ್ಕೆ ಸಪ್ತಪದಿ ತುಳಿದು ದಾಂಪತ್ಯಕ್ಕೆ ಕಾಲಿಟ್ಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಈಗ ಏನು ಮಾಡಿದರೂ ಸುದ್ದಿಯೇ! ಪ್ರಸ್ತುತ ಅವರು ಬೆಂಗಳೂರು ಏರ್ಪೋರ್ಟ ನಲ್ಲಿ ಬರುತ್ತಿರುವ ವಿಡಿಯೋ ವೈರಲ್ ಆಗಿದೆ.

ಆರತಕ್ಷತೆಗಾಗಿ ಬೆಂಗಳೂರಿಗೆ ಬಂದಿದ್ದ ಈ ಜೋಡಿ ಏರ್ ಪೋರ್ಟ್ ನಲ್ಲಿ ಬರುತ್ತಿದ್ದಾಗ ಎಸ್ಕಲೇಟರ್ ಮೇಲೆ ರಣವೀರ್ ಹಾಗೂ ಪಕ್ಕದ ಮೆಟ್ಟಿಲುಗಳ ಮೇಲೆ ದೀಪಿಕಾ ನಡೆದು ಬರುತ್ತಿರುವುದು ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಇದನ್ನು ಅಭಿಮಾನಿ ಒಬ್ಬರು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದೆ ಇದಕ್ಕೆ ಕಾರಣವಾಗಿದೆ.

ಈ ಜೋಡಿಗಳ ನಡುವಿನ ಬಾಂಧವ್ಯದ ಬಗ್ಗೆ ಈಗ ಅಭಿಮಾನಿಗಳು ಕಾಮೆಂಟ್ ಗಳ ರೂಪದಲ್ಲಿ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಟ್ವಿಟ್ಟರ್, ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಸದ್ದು ಮಾಡುತ್ತಿವೆ.

ಅಂದ ಹಾಗೆ ಮುಂದಿನ ರಿಸೆಪ್ಷನ್ ನವೆಂಬರ್ 28 ರಂದು ಮುಂಬೈನಲ್ಲಿ ನಡೆಯಲಿದೆ. ಇದರಲ್ಲಿ ಬಾಲಿವುಡ್ ನ ಖ್ಯಾತನಾಮರೆಲ್ಲ ಭಾಗವಹಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...