alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಈ ಮಾಡೆಲ್ ಪಡೆಯುತ್ತಿರುವ ಸಂಭಾವನೆ ಕೇಳಿದ್ರೇ….

ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಇಂದು ಕೇವಲ ಸಾಮಾಜಿಕ ಜಾಲತಾಣಗಳಾಗಿ ಅಷ್ಟೇ ಉಳಿದಿಲ್ಲ. ಅದು ಪವರ್ಫುಲ್ ಮಾಧ್ಯಮ ಕೂಡ. ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮೂಲಕ ಅನೇಕ ಪ್ರಾಡಕ್ಟ್ ಗಳಿಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿಬಿಟ್ಟಿದೆ. ಅದರಲ್ಲೂ ಇನ್ಸ್ಟಾಗ್ರಾಮ್ನ ಮೋಸ್ಟ್ ಸೇಲೆಬಲ್ ಐಟಂ ಆದ್ರೆ ಸೆಲೆಬ್ರಿಟಿಗಳು.

ಹಾಗಂತ ಇನ್ಸ್ಟಾ ಸೆಲೆಬ್ರಿಟಿಗಳಿಗೆ ಸುಮ್ಮನೆ ಪೋಸ್ಟ್ ಮಾಡಿ ಅನ್ನೋದಿಲ್ಲ. ಅದಕ್ಕೆ ಸೂಕ್ತ ಸಂಭಾವನೆಯನ್ನು ಕೊಡುತ್ತೆ. ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್ ಗಳಿಂದ ಈ ವರ್ಷದಲ್ಲಿ ಹೆಚ್ಚು ರೊಕ್ಕ ಸಂಪಾದನೆ ಮಾಡಿದವರ ಪಟ್ಟಿ ಈಗ ಹೊರಬಿದ್ದಿದೆ.

ಹೋಪರ್ ಎಚ್ಕ್ಯು ಇನ್ಸ್ಟಾಗ್ರಾಮ್ ನ ಪೋಸ್ಟ್ ಗಳಿಂದ ಅತಿ ಹೆಚ್ಚು ಹಣವನ್ನು ಸಂಪಾದನೆ ಮಾಡೋದು ಯಾರು ಅನ್ನೋ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಆ ಪ್ರಕಾರ ಕೆಲ್ಲಿ ಜೆನ್ನರ್ ಪಟ್ಟಿಯಲ್ಲಿ ಟಾಪರ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಪ್ರಾಯೋಜಿತ ಪ್ರತಿ ಪೋಸ್ಟ್ ಗೆ ಜೆನ್ನರ್ ಪಡೆಯುವ ಸಂಭಾವನೆ 1 ಮಿಲಿಯನ್ ಅಮೆರಿಕನ್ ಡಾಲರ್.

ಈ ಮೊತ್ತವನ್ನ ಭಾರತೀಯ ರೂಪಾಯಿಗೆ ಕನ್ವರ್ಟ್ ಮಾಡಿದ್ರೆ 6 ಕೋಟಿ 87 ಲಕ್ಷದ 75 ಸಾವಿರ ರೂಪಾಯಿಗಳಾಗುತ್ತೆ. ಕಾಸ್ಮೆಟಿಕ್ ಸಾಮ್ರಾಜ್ಯವನ್ನೇ ಹೊಂದಿರುವ ಕೆಲ್ಲಿ ಜೆನ್ನರ್ ನ ಇನ್ಸ್ಟಾ ಪ್ರಾಯೋಜಿತ ಪ್ರತಿ ಪೋಸ್ಟ್ ಕೋಟಿ ಕೋಟಿ ಹಣವನ್ನು ಗಳಿಸುತ್ತೆ.

ಇಷ್ಟೇ ಅಲ್ಲ. ಈ ಪಟ್ಟಿಯಲ್ಲಿ ಜಗತ್ತಿನ ಖ್ಯಾತ ಸಿನಿಮಾ ನಟರು, ಕ್ರಿಕೆಟ್, ಫುಟ್ ಬಾಲ್ ಆಟಗಾರರು ಮಾಡೆಲ್ ಗಳು ತಮ್ಮ ಪ್ರತಿ ಪೋಸ್ಟ್ ಗಳಿಂದ ಸಂಭಾವನೆಯನ್ನು ಪಡೆಯುತ್ತಾರೆ. ಭಾರತದ ಕ್ರಿಕೆಟ್ ತಂಡ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದಾರೆ. ತಮ್ಮ ಪ್ರತಿ ಪೋಸ್ಟ್ ಗೆ ವಿರಾಟ್ ಕೊಹ್ಲಿ 1 ಲಕ್ಷದ 20 ಸಾವಿರ ಅಮೆರಿಕನ್ ಡಾಲರ್ ಹಣವನ್ನು ಅಂದ್ರೆ 80 ಲಕ್ಷ ರೂಪಾಯಿಗಳನ್ನ ಪಡೀತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...