alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಶಸ್ತಿ ಕೈತಪ್ಪಿದ್ರೂ ಪ್ರಾಮಾಣಿಕ ಉತ್ತರ ಕೊಟ್ಲು ಸುಂದರಿ

ಸೌಂದರ್ಯ ಸ್ಪರ್ಧೆಗಳಲ್ಲಿ ಪ್ರಶ್ನೋತ್ತರ ಸುತ್ತು ಬಹಳ ಮುಖ್ಯ. ಸ್ಪರ್ಧಿಗಳ ಬುದ್ಧಿವಂತಿಕೆ ಹಾಗೂ ಚುರುಕುತನವನ್ನು ನಿರ್ಣಾಯಕರು ಪರೀಕ್ಷಿಸುತ್ತಾರೆ. ಹಾಗಾಗಿ ಈ ಸುತ್ತು ಅತ್ಯಂತ ಕುತೂಹಲಕಾರಿಯಾಗಿರುತ್ತದೆ.

ಮಿಸ್ ಯೂನಿವರ್ಸ್ ಫಿಲಿಪೈನ್ಸ್ 2018ನಲ್ಲಿ ಸ್ಪರ್ಧಿಯೊಬ್ಬಳು ನೀಡಿದ ಪ್ರಾಮಾಣಿಕ ಉತ್ತರ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಂಡ್ರಾ ಲೆಮೊನ್ ಎಂಬಾಕೆ ನೀಡಿದ ಉತ್ತರ ವೈರಲ್ ಆಗಿದೆ.

ಸರ್ಕಾರ ಬಿಲ್ಡ್ ಬಿಲ್ಡ್ ಬಿಲ್ಡ್ ಯೋಜನೆಯ ಬಗ್ಗೆ ನಿಮ್ಮ ಒಳನೋಟವೇನು ಅಂತಾ ಸಾಂಡ್ರಾಳನ್ನು ತೀರ್ಪುಗಾರರು ಪ್ರಶ್ನಿಸಿದ್ರು. ಆದ್ರೆ ಆ ಯೋಜನೆ ಬಗ್ಗೆ ಆಕೆಗೆ ಗೊತ್ತಿರಲಿಲ್ಲ. ಅದನ್ನವಳು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾಳೆ.

ನಾನು ಪ್ರಶ್ನೋತ್ತರ ಸುತ್ತಿಗಾಗಿ ಸಾಕಷ್ಟು ತಯಾರಿ ಮಾಡಿದ್ದೇನೆ, ಆದ್ರೆ ಈ ಯೋಜನೆ ಬಗ್ಗೆ ನನಗೆ ಗೊತ್ತಿಲ್ಲ, ನಾನು ಒಳ್ಳೊಳ್ಳೆ ಪ್ರಶ್ನೆಗಳಿಗೆ ಉತ್ತರಿಸಲೆಂದು ಬಂದಿದ್ದೇನೆ ಅಂತಾ ನೇರವಾಗಿ ಉತ್ತರಿಸಿದ್ಲು ಸಾಂಡ್ರಾ.

ಕ್ಯಾಟ್ರಿಯಾನಾ ಎಲಿಸಾ ಎಂಬಾಕೆ ಮಿಸ್ ಯೂನಿವರ್ಸ್ ಫಿಲಿಪೈನ್ಸ್ ಕಿರೀಟವನ್ನು ಗೆದ್ದಿದ್ದಾಳೆ. ಆದ್ರೆ ಪ್ರಾಮಾಣಿಕ ಉತ್ತರದ ಮೂಲಕ ಸಾಂಡ್ರಾ ಎಲ್ಲರ ಹೃದಯ ಗೆದ್ದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...