alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಡೆಲ್ ಫಾಲೋವರ್ಸ್ ಗೆ ಜಾರಿಯಾಗಿದೆ ಹೊಸ ನಿಯಮ

ವಿಶ್ವದ ಅತಿ ಕಿರಿಯ ಬ್ಯುಸಿನೆಸ್ ಟೈಕೂನ್, ರೂಪದರ್ಶಿ, ಮೇಕಪ್ ಸಾಮಗ್ರಿಗಳ ಬ್ರ್ಯಾಂಡ್ ನ ಬಿಗ್ ನೇಮ್ ಕೆಲ್ಲಿ ಜೆನ್ನರ್ ತನ್ನ ಇನ್ಸ್ಟಾ ಫಾಲೋವರ್ಸ್ಗೆ ಹೊಸ ನಿಯಮವನ್ನ ಜಾರಿ ಮಾಡಿದ್ದಾರೆ. ಇನ್ಮುಂದೆ ಕೆಲ್ಲಿಯನ್ನ ಇನ್ಸ್ಟಾದಲ್ಲಿ ಫಾಲೋ ಮಾಡೋದಕ್ಕೆ ಮೊದಲು ಕೆಲವು ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಲೇಬೇಕಂತೆ. ಕೆಲ್ಲಿ ಒಡೆತನದ ಮೇಕಪ್ ಪ್ರಾಡಕ್ಟ್ ಗಳನ್ನ ಲಿಪ್ ಸ್ಟಿಕ್ಗಳ ತೆರೆಯನ್ನು ಫ್ರಂಟ್ ಕ್ಯಾಮರಾ ಮೂಲಕ ತೆರೆಯಬೇಕಿದೆ.

ವರ್ಚುವಲ್ ಟೆಸ್ಟ್ ಫಿಲ್ಟರ್ಸ್ಗಳನ್ನ ತನ್ನ ಇನ್ಸ್ಟಾ ಖಾತೆಯಲ್ಲಿ ಲಾಕ್ ಸ್ಕ್ರೀನ್ ಮಾದರಿಯಲ್ಲಿ ಕೆಲ್ಲಿ ಹಾಕಿಕೊಂಡಿದ್ದಾರೆ. ನಕಲಿ ಫಾಲೋವರ್ಸ್ ಗಳ ಕಾಟದಿಂದ ಮುಕ್ತವಾಗೋದಕ್ಕೆ ಕೆಲ್ಲಿ ಈ ಮಾರ್ಗವನ್ನು ಅನುಸರಿಸಿದ್ದಾರಂತೆ. ಆನ್ಲೈನ್ ಬ್ಯೂಟಿ ಪ್ರಾಡಕ್ಟ್ಗಳ ಖರೀದಿಗೂ ಮೊದಲು ಗ್ರಾಹಕರು ಸುಲಭವಾಗಿ ತನ್ನ ಉತ್ಪನ್ನಗಳನ್ನು ಟೆಸ್ಟ್ ಮಾಡೋದಕ್ಕೆ ಅನುಕೂಲವಾಗೋದಕ್ಕೆ ಈ ರೀತಿಯ ಐಡಿಯಾ ಮಾಡಿದ್ದಾರಂತೆ.

ಅಮೆರಿಕದ ಅತ್ಯಂತ ಕಿರಿಯ ಮಿಲಿಯನೇರ್ ಅನ್ನೋ ಖ್ಯಾತಿಗೆ ಪಾತ್ರರಾಗಿರುವ ಕೆಲ್ಲಿ ಜನ್ನರ್ 2016ರಲ್ಲಿ ತನ್ನ ಮೇಕಪ್ ಸಾಮಗ್ರಿಗಳ ಉತ್ಪನ್ನಗಳ ಮಾರಾಟವನ್ನು ಆರಂಭಿಸಿದರು. 20ವರ್ಷದ ಕೆನ್ನಿ ಈಗಾಗ್ಲೇ ವಿಶ್ವದ ಶ್ರೀಮಂತರ ಫೋರ್ಬ್ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...