alex Certify
ಕನ್ನಡ ದುನಿಯಾ       Mobile App
       

Kannada Duniya

3ರ ಪೋರಿ ಗಾಯನಕ್ಕೆ ನೋಡುಗರೇ ಅಚ್ಚರಿ..!

claire

ಕ್ಯಾಲಿಫೋರ್ನಿಯಾ: ಮಕ್ಕಳಿರಲವ್ವ ಮನೆ ತುಂಬ ಎಂಬ ಮಾತು ಕೇಳಿರುತ್ತೀರಾ. ಮಕ್ಕಳು ಮನೆಯಲ್ಲಿದ್ದರೆ ದಿನವಿಡೀ ದುಡಿದು ಬಂದ ದೇಹಕ್ಕೆ ಅವರ ಮಾತಿನಿಂದ ಆಯಾಸ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಪುಟ್ಟ ಬಾಲಕಿಯೊಬ್ಬಳ ಹಾಡು ಸಂಚಲನ ಸೃಷ್ಟಿಸಿದ ಸ್ಟೋರಿ ಇಲ್ಲಿದೆ ನೋಡಿ.

ಕ್ಯಾಲಿಫೋರ್ನಿಯಾದ 3 ವರ್ಷದ ಬಾಲೆ ಗಾಯನವೀಗ ಯು ಟ್ಯೂಬ್ ನಲ್ಲಿ ಸಂಚಲವನ್ನೇ ಸೃಷ್ಟಿಸಿದ್ದು, ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ. ಕ್ಲೈರೆ ರ್ಯಾನ್ ಎಂಬ ಬಾಲಕಿ 1989ರಲ್ಲಿ ರಿಲೀಸ್ ಆಗಿದ್ದ ‘ಕ್ಲಾಸಿಕ್ ಡಿಸ್ನಿ’ ಸಿನಿಮಾದಲ್ಲಿನ ಹಾಡನ್ನು ಸ್ವಲ್ಪವೂ ಮಿಸ್ಟೇಕ್ ಇಲ್ಲದೇ, ಸ್ಪಷ್ಟವಾಗಿ ಹಾಡಿದ್ದು, ಆಕೆಯ ತಂದೆ ಇದೇ ಜನವರಿ 9 ರಂದು ಯು ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬಾಲಕಿಯ ಹಾಡಿಗೆ ನೋಡುಗರೆಲ್ಲಾ ಫಿದಾ ಆಗಿದ್ದಾರೆ ಎಂದು ಹೇಳಲಾಗಿದೆ.

ಕ್ಲೈರೆ ರ್ಯಾನ್ ಮನೆ, ಪರಿಸರ, ತಂದೆ, ವಾತ್ಸಲ್ಯ ಹೀಗೆ ತಾನು ಕಂಡಿದ್ದನ್ನು 3 ನಿಮಿಷದ ಹಾಡಿನಲ್ಲಿ ಹೇಳಿದ್ದು, ಅದ್ಭುತವಾಗಿ ಮೂಡಿಬಂದಿದೆ. 15 ದಿನದಲ್ಲಿ ಈ ವೀಡಿಯೋವನ್ನು 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಬಾಲಕಿಯ ಗಾಯನಕ್ಕೆ ತಲೆದೂಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...