alex Certify
ಕನ್ನಡ ದುನಿಯಾ       Mobile App
       

Kannada Duniya

ಐಶ್ ‘ಫನ್ನಿ ಖಾನ್’ ಶೂಟಿಂಗ್ ವೇಳೆ ಅಪಘಾತ

ಐಶ್ವರ್ಯ ರೈ ಬಚ್ಚನ್ ಅಭಿನಯದ ‘ಫನ್ನಿ ಖಾನ್’ ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಚಿತ್ರದ ಶೂಟಿಂಗ್ ರಸ್ತೆ ಮೇಲೆ ನಡೆಯುತ್ತಿತ್ತು. ಈ ವೇಳೆ ಮೂರನೇ ಸಹಾಯಕ ನಿರ್ದೇಶಕನಿಗೆ ಅಪಘಾತವಾಗಿದೆ.

ರಸ್ತೆಯೊಂದರಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ನಟಿ ಐಶ್ವರ್ಯ ರೈ ಕೂಡ ಇದ್ದರು. ನಟಿ ಟ್ಯಾಕ್ಸಿಗೆ ಕೈ ಮಾಡಿ ಟ್ಯಾಕ್ಸಿ ನಿಲ್ಲಿಸುವ ದೃಶ್ಯ ಅದಾಗಿತ್ತು. ಈ ವೇಳೆ ಮೂರನೇ ಸಹಾಯಕ ನಿರ್ದೇಶಕ ರಸ್ತೆ ದಾಟಲು ಮುಂದಾಗಿದ್ದಾನೆ. ಓಡಿ ಬರ್ತಿದ್ದ ಆತನಿಗೆ ಬೈಕ್ ಹಾರನ್ ಕೇಳಲಿಲ್ಲ. ನಿರ್ದೇಶಕನಿಗೆ ಬೈಕ್ ಬಂದು ಗುದ್ದಿದೆ. ತಕ್ಷಣ ಆತ ಕೆಳಗೆ ಬಿದ್ದಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಘಟನೆ ನಡೆಯುತ್ತಿದ್ದಂತೆ ಅಲ್ಲಿಗೆ ಧಾವಿಸಲು ನಟಿ ಐಶ್ವರ್ಯ ರೈ ಮುಂದಾಗಿದ್ದರು ಎನ್ನಲಾಗಿದೆ. ಆದ್ರೆ ಭದ್ರತಾ ಸಿಬ್ಬಂದಿ ಐಶ್ ರನ್ನು ತಡೆದಿದ್ದಾರೆ. ಐಶ್ ಅಲ್ಲಿಗೆ ಹೋದ್ರೆ ಇನ್ನಷ್ಟು ಸಾರ್ವಜನಿಕರು ಬಂದು ಮತ್ತೊಂದು ಸಮಸ್ಯೆ ಶುರುವಾಗುತ್ತೆ ಎನ್ನುವ ಕಾರಣಕ್ಕೆ ಐಶ್ ರನ್ನು ತಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...