alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಪ್ರಭಾಸ್ ಹೊಸ ಚಿತ್ರದ ಇಂಟ್ರೆಸ್ಟಿಂಗ್ ಮಾಹಿತಿ

p

ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಸಾಹೋ’ ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡ್ತಾನೇ ಇದೆ. ಆದ್ರೂ ಈ ಸಿನೆಮಾ ಬಗ್ಗೆ ನಿರ್ಮಾಪಕರು ಮಾತ್ರ ಗುಟ್ಟು ಬಿಟ್ಟುಕೊಟ್ಟಿಲ್ಲ. ಇಲ್ಲಿ ನಾವು ಬಿಚ್ಚಿಡುವ ಕೆಲವೊಂದು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಓದಿದ್ರೆ, ಅಭಿಮಾನಿಗಳಲ್ಲಿ ‘ಸಾಹೋ’ ಚಿತ್ರ ವೀಕ್ಷಿಸುವ ಕಾತರ ಇನ್ನಷ್ಟು ಹೆಚ್ಚಾಗೋದು ಗ್ಯಾರಂಟಿ.

ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಸಾಹೋ’ ಚಿತ್ರಕ್ಕಾಗಿ ಅದ್ಧೂರಿ ಸೆಟ್ ಹಾಕಲಾಗಿದೆ. ವಿಸ್ತಾರವಾದ ಗಾರ್ಡನ್ ಏರಿಯಾದಲ್ಲಿ ಚಿತ್ರದ ಪ್ರಮುಖ ದೃಶ್ಯಗಳ ಶೂಟಿಂಗ್ ನಡೆಯಲಿದೆ. ವಸಾಹತು ಭಾರತದ ಸೀನ್ ಗಳು ಕ್ಯಾಮರಾದಲ್ಲಿ ಸೆರೆಯಾಗುತ್ತಿವೆ. ಸಾಹಸ ದೃಶ್ಯಕ್ಕಾಗಿ 100ಕ್ಕೂ ಹೆಚ್ಚು ಕುದುರೆಗಳನ್ನು ಸೆಟ್ ಗೆ ಕರೆತರಲಾಗಿದೆ.

ಸದ್ಯ ಯುದ್ಧ ಸನ್ನಿವೇಶಕ್ಕಾಗಿ ತರಬೇತಿ ನೀಡಲಾಗುತ್ತಿದೆ. ಪೋಲೋ ಗೇಮ್ ನ ದೃಶ್ಯವನ್ನೂ ಚಿತ್ರೀಕರಿಸಲಾಗುತ್ತದೆ. ನಟರೆಲ್ಲ ಮಹಾರಾಜರು ಧರಿಸುವಂತಹ ಸಾಂಪ್ರದಾಯಿಕ ಕುರ್ತಾ, ಪೈಜಾಮ ತೊಟ್ಟಿದ್ದಾರೆ. ಇನ್ನೊಂದ್ಕಡೆ ಬ್ರಿಟಿಷರ ಪಾತ್ರ ಮಾಡಿದವರು ಖಾಕಿ ಸಮವಸ್ತ್ರ ಮತ್ತು ಬಣ್ಣಬಣ್ಣದ ಪ್ಯಾಂಟ್ ಶರ್ಟ್ ಧರಿಸಿದ್ದಾರೆ. ನಾವು ಇಷ್ಟೆಲ್ಲಾ ಹೇಳಿದ್ಮೇಲೆ ಸಹಜವಾಗಿಯೇ ನಿಮ್ಮಲ್ಲಿ ‘ಸಾಹೋ’ ನೋಡಬೇಕೆಂಬ ಕುತೂಹಲ ಜಾಸ್ತಿಯಾಗಿರಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...