alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಸೋನಮ್ ಕಪೂರ್ ಮೇಲೂ ಲೈಂಗಿಕ ದೌರ್ಜನ್ಯ

sonam-ka

ಥಿಯೇಟರ್ ನಲ್ಲೇ ಬಾಲಿವುಡ್ ಖ್ಯಾತ ನಟಿ ಸೋನಮ್ ಕಪೂರ್ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಇದನ್ನು ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ.

ನಾನು ನಟಿಯಾಗುವ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದೆ. ಯಾರೂ ಗುರುತಿಸುತ್ತಿರಲಿಲ್ಲ. 13 ನೇ ವಯಸ್ಸಿನಲ್ಲಿ ಸಿನಿಮಾ ಥಿಯೇಟರ್ ಗೆ ಹೋಗಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮೈ ಕೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದ ಎಂದು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ತಿಳಿಸಿದ್ದಾರೆ.

ಥಿಯೇಟರ್ ನಲ್ಲಿ ನಡೆದ ಘಟನೆಯಿಂದ ನಾನು ನೊಂದಿದ್ದೆ. ಈ ವಿಷಯವನ್ನು ನಮ್ಮ ಶಾಲೆಯ ಶಿಕ್ಷಕರಿಗೆ ಹಾಗೂ ಕೌನ್ಸಿಲಿಂಗ್ ನಲ್ಲಿ ಹೇಳಿದ್ದೆ. ಅವರು ಮೈ ಕೈ ಮುಟ್ಟುವುದು ಸಾಮಾನ್ಯ ಎಂದು ಹೇಳಿದ್ದರು. ಆದರೆ ನನಗೆ ಯಾರಾದರೂ ಮೈ ಕೈ ಮುಟ್ಟಿದರೆ, ಅದೂ ಲೈಂಗಿಕ ದೌರ್ಜನ್ಯವೇ ಎಂಬುದು ಗೊತ್ತಿತ್ತು ಎಂದು ತಿಳಿಸಿದ್ದಾರೆ.

ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಇಂತಹ ವಿಷಯಗಳ ಬಗ್ಗೆ ತಿಳಿಸಬೇಕು. ಅವರಿಗೆ ಲೈಂಗಿಕ ಶಿಕ್ಷಣದ ಕೊರತೆ ಕಾರಣ ಕೆಲವೊಮ್ಮೆ ಖಿನ್ನತೆಗೆ ಒಳಗಾಗುತ್ತಾರೆ. ಈ ಬಗ್ಗೆ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೆಣ್ಣುಮಕ್ಕಳಿಗೆ ಸುರಕ್ಷಿತ ಸ್ಥಳವೇ ಇಲ್ಲದಂತಾಗಿದೆ. ಜನ ಜಂಗುಳಿಯಲ್ಲೇ ಮೈ ಕೈ ಮುಟ್ಟುತ್ತಾರೆ. ಇದು ಲೈಂಗಿಕ ದೌರ್ಜನ್ಯ ಎಂಬುದು ತಿಳಿದಿರಬೇಕಾದ ವಿಷಯ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...