alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ಲಿಯೋನ್ ಪೋರ್ನ್ ಸ್ಟಾರ್ ಆಗಿದ್ದು ಹೀಗೆ…!

ಪೋರ್ನ್ ಸ್ಟಾರ್ ನಿಂದ ಬಾಲಿವುಡ್ ಸ್ಟಾರ್ ಆದ ಸನ್ನಿ ಲಿಯೋನ್ ಜೀವನ ಚರಿತ್ರೆ ತೆರೆ ಮೇಲೆ ಬರ್ತಿದೆ. ತನ್ನ ಜೀವನ ಚರಿತ್ರೆ ತೆರೆ ಮೇಲೆ ಬರ್ತಿದೆ ಎನ್ನುವ ವಿಷ್ಯವನ್ನು ಸ್ವತಃ ಸನ್ನಿ ಲಿಯೋನ್ ಟ್ವೀಟರ್ ಮೂಲಕ ಹೇಳಿದ್ದಾಳೆ. ಸನ್ನಿ ಬಯೋಪಿಕ್ ನಲ್ಲಿ ಅಭಿಮಾನಿಗಳಿಗೆ ಗೊತ್ತಿರದ ಅನೇಕ ಸಂಗತಿಗಳು ಇರಲಿದೆಯಂತೆ.

ಕೆನಡಾದಿಂದ ಭಾರತಕ್ಕೆ ಏಕೆ ಬಂದೆ? ಸನ್ನಿ ಎಂಬ ಹೆಸರನ್ನು ಏಕೆ ಆಯ್ಕೆ ಮಾಡಿಕೊಂಡೆ? ನನ್ನ ಜೀವನ ಹೇಗಿತ್ತು? ನನ್ನ ಒಳಗಿರುವ ಒಬ್ಬ ಮಹಿಳೆ, ನಾನು ಪೋರ್ನ್ ದಿಂದ ಇಲ್ಲಿಯವರೆಗೆ ಬಂದ ಎಲ್ಲ ಸಂಗತಿಗಳೂ ಬಯೋಪಿಕ್ ನಲ್ಲಿ ಇರಲಿವೆ ಎಂದು ಸನ್ನಿ ಟ್ವಿಟ್ ನಲ್ಲಿ ಹೇಳಿದ್ದಾಳೆ.

ಜಿ5 ವರಿಜಿನಲ್ ನಲ್ಲಿ ಸನ್ನಿ ಬಯೋಪಿಕ್ ಪ್ರಸಾರವಾಗಲಿದೆಯಂತೆ. ಇದ್ರಲ್ಲಿ ಸನ್ನಿ ಪೋರ್ನ್ ಸ್ಟಾರ್ ಹೇಗಾದ್ಲು ಎಂಬ ಮಾಹಿತಿ ಕೂಡ ಇರಲಿದೆಯಂತೆ. 1981ರಲ್ಲಿ ಕೆನಡಾದಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿರುವ ಸನ್ನಿ 16ನೇ ವಯಸ್ಸಿನಲ್ಲಿಯೇ ತನ್ನ ಕನ್ಯತ್ವ ಕಳೆದುಕೊಂಡಿದ್ದಾಳೆ. ಬಾಸ್ಕೆಟ್ ಬಾಲ್ ಆಟಗಾರನ ಪ್ರೀತಿಗೆ ಬಿದ್ದಿದ್ದ ಸನ್ನಿಗೆ ಕನ್ಯತ್ವ ಕಳೆದುಕೊಂಡ ನೋವಿಲ್ಲವಂತೆ.

ಸನ್ನಿ ತನ್ನ 19ನೇ ವಯಸ್ಸಿನಲ್ಲಿ ಪೋರ್ನ್ ಜಗತ್ತಿಗೆ ಕಾಲಿಟ್ಟಿದ್ದಳು. ಮೊದಲ ಬಾರಿ ಸಲಿಂಗಕಾಮಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಳಂತೆ. ಸನ್ನಿ ಇಷ್ಟದಂತೆ ಪೋರ್ನ್ ಜಗತ್ತಿಗೆ ಕಾಲಿಟ್ಟಿದ್ದಳಂತೆ. ಸುಮಾರು 68 ಲಕ್ಷ ರೂಪಾಯಿ ಗಳಿಸಿದ ನಂತ್ರ ಪಾಲಕರಿಗೆ ಹೇಳಿದ್ದಳಂತೆ. ಆದ್ರೆ ಪಾಲಕರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರಂತೆ. ನನ್ನ ಜೀವನದ ಬಗ್ಗೆ ನನಗೆ ಭರವಸೆಯಿದೆ ಎಂದು ಸನ್ನಿ ಪಾಲಕರಿಗೆ ಹೇಳಿದ್ದಳಂತೆ.

ಪೋರ್ನ್ ಜಗತ್ತಿಗೆ ಬರುವ ಮುನ್ನ ಸನ್ನಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳಂತೆ. ಮಾಡೆಲ್ ಆಗಿ ವೃತ್ತಿ ಶುರು ಮಾಡಿದ್ದ ಸನ್ನಿ 41ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳೆ. 25 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...