alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ ದಾಖಲೆಯನ್ನು ಹಿಂದಿಕ್ಕಿದ ‘ದಿ ವಿಲನ್’

ಅಭಿಮಾನಿಗಳು ‘ದಿ ವಿಲನ್’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಈ ಸಿನಿಮಾ ಮೊದಲ ದಿನವೇ 20 ಕೋಟಿ ಕಲೆಕ್ಷನ್ ಮಾಡಿದೆ.

ಪ್ರೇಮ್ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಕಾಂಬೀನೇಷನ್ ನಲ್ಲಿ ಮೂಡಿಬಂದ ‘ದಿ ವಿಲನ್’ ಸಿನಿಮಾ ಗುರುವಾರ ಬಿಡುಗಡೆಯಾಗಿತ್ತು.

ಸ್ಯಾಂಡಲ್ ವುಡ್ ನ ಹಿಂದಿನ ಎಲ್ಲಾ ದಾಖಲೆಗಳನ್ನು ಈ ಸಿನಿಮಾ ಮುರಿದಿದೆ. ಮೊದಲ ದಿನವೇ 20 ಕೋಟಿ ಬಾಚಿಕೊಂಡ ಈ ಚಿತ್ರ ವಾರಾಂತ್ಯದಲ್ಲಿ 50 ಕೋಟಿ ದಾಟುವ ನಿರೀಕ್ಷೆ ಇದೆ.

ಇದರ ಮಧ್ಯೆ, ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ದಾಖಲೆಯೊಂದನ್ನು ದಿ ವಿಲನ್ ಹಿಂದಿಕ್ಕಿದ್ದು, ‘ಬಾಹುಬಲಿ’ ಚಿತ್ರ ಮೊದಲ ಶೋ ನಿಂದ 34 ಲಕ್ಷ ರೂ. ಕಲೆಕ್ಷನ್ ಮಾಡಿದ್ದು ದಾಖಲೆಯಾಗಿತ್ತು. ಆದರೆ ‘ದಿ ವಿಲನ್’ ಚಿತ್ರದ ಮೊದಲ ಶೋ ಕಲೆಕ್ಷನ್ 48 ಲಕ್ಷ ರೂ. ದಾಟಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ ಶಿವಣ್ಣ, ಕಿಚ್ಚ ಸುದೀಪ್ ಕಾಂಬಿನೇಷನ್ ದಿ ವಿಲನ್ ಕನ್ನಡ ಚಿತ್ರರಂಗಕ್ಕೆ ಒಂದು ಕೀರ್ತಿ ತಂದುಕೊಟ್ಟಿದೆ ಎಂದರೆ ತಪ್ಪಾಗಲಾರದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...