alex Certify
ಕನ್ನಡ ದುನಿಯಾ       Mobile App
       

Kannada Duniya

‘ದಿ ವಿಲನ್’ ಚೇಸಿಂಗ್ ಸೀನ್ ಗೆ ಹಾಲಿವುಡ್ ಟಚ್

ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ, ‘ದಿ ವಿಲನ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರದ ಹೈಲೈಟ್ ಗಳಲ್ಲಿ ಒಂದಾದ ಚೇಸಿಂಗ್ ದೃಶ್ಯವನ್ನು ಹಾಲಿವುಡ್ ಸಾಹಸ ನಿರ್ದೇಶಕರ ಸಾರಥ್ಯದಲ್ಲಿ ಸೆರೆಹಿಡಿಯಲಾಗ್ತಿದೆ.

ಭರ್ಜರಿ ಯಶಸ್ಸು ಕಂಡಿದ್ದ ‘ಫಾಸ್ಟ್ & ಫ್ಯೂರಿಯಸ್’ ಮತ್ತು ‘ಹ್ಯಾರಿ ಪಾಟರ್’ ಸರಣಿ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದ ಗ್ರೆಗ್ ಪೊವೆಲ್ ಅವರು ‘ದಿ ವಿಲನ್’ ಚಿತ್ರದ ಚೇಸಿಂಗ್ ದೃಶ್ಯವನ್ನು ಸಂಯೋಜಿಸಿದ್ದಾರೆ.

ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಮಿಥುನ್ ಚಕ್ರವರ್ತಿ, ಆಮಿ ಜಾಕ್ಸನ್ ಮೊದಲಾದವರು ‘ದಿ ವಿಲನ್’ನಲ್ಲಿ ಅಭಿನಯಿಸಿದ್ದಾರೆ. ‘ಜೋಗಿ’ ಪ್ರೇಮ್ ನಿರ್ದೇಶನವಿರುವ ಈ ಚಿತ್ರದ ಚಿತ್ರೀಕರಣ ಪಟ್ಟಾಯದಲ್ಲಿ ನಡೆದಿದೆ.

ಹೈ ಬಜೆಟ್ ನಲ್ಲಿ ಚೇಸಿಂಗ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಹಾಲಿವುಡ್ ಸಾಹಸ ನಿರ್ದೇಶಕ ಗ್ರೆಗ್ ಪೊವೆಲ್ ಸಾಹಸ ನಿರ್ದೇಶನ ಮಾಡಿದ್ದಾರೆ. ಅವರಿಗೆ ಖ್ಯಾತ ಥಾಯ್ ಸ್ಟಂಟ್ ಮಾಸ್ಟರ್ ನುವಾಂಗ್ ಸಾಥ್ ನೀಡಿದ್ದಾರೆ.

ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿರುವ ‘ದಿ ವಿಲನ್’ ಹಾಲಿವುಡ್ ಸಾಹಸ ನಿರ್ದೇಶಕರ ಎಂಟ್ರಿಯಿಂದಾಗಿ ಮತ್ತಷ್ಟು ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...