alex Certify
ಕನ್ನಡ ದುನಿಯಾ       Mobile App
       

Kannada Duniya

‘ದಿ ವಿಲನ್’ ಟಿಕೆಟ್ ದರ ಎಷ್ಟಂತೆ ನಿಮಗೇನಾದ್ರೂ ಗೊತ್ತಾ?

ಸ್ಯಾಂಡಲ್ ವುಡ್ ಸ್ಟಾರ್ ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಜೋಡಿಯಾಗಿ ನಟಿಸಿದ ದೊಡ್ಡ ಬಜೆಟ್ ನಲ್ಲಿ ಮೂಡಿಬರುತ್ತಿರುವ ‘ದಿ ವಿಲನ್’ ಚಿತ್ರದ ಟಿಕೆಟ್ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ.

ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ಚಿತ್ರಕ್ಕೆ ನಿರ್ಮಾಪಕರು ತುಂಬಾ ಹಣ ಖರ್ಚು ಮಾಡಿದ್ದರಿಂದ ಸಿನಿಮಾ ಟಿಕೆಟ್ ದರ ಏರಿಸುವುದರ ಮೂಲಕ ರಿಕವರಿ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಬೇರೆ ಚಿತ್ರಗಳ ಟಿಕೆಟ್ ಬೆಲೆಗೆ ಹೋಲಿಸಿದರೆ ‘ದಿ ವಿಲನ್’ ಟಿಕೆಟ್ ಬೆಲೆಗಳು ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ 200 ರೂ. ಆದರೆ ಮಲ್ಟಿಪ್ಲೆಕ್ಸ್ ನಲ್ಲಿ 400 ರೂ. ವರೆಗೂ ಟಿಕೆಟ್ ದರ ನಿಗದಿಪಡಿಸಲಾಗುತ್ತದೆ ಎನ್ನಲಾಗಿದೆ.

ಹೀಗೇ ‘ದಿ ವಿಲನ್’ ಚಿತ್ರದ ಮೂಲಕ ಟಿಕೆಟ್ ಬೆಲೆ ಏರಿಕೆಯಾದ್ರೆ. ಮುಂದೆ ಬರುವ ಸಿನಿಮಾಗಳಲ್ಲಿ ಕೂಡ ಈ ಏರಿಕೆ ಮುಂದುವರಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...