alex Certify
ಕನ್ನಡ ದುನಿಯಾ       Mobile App
       

Kannada Duniya

ಯಶಸ್ಸಿನ ಗುಟ್ಟು ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್

ಸ್ಯಾಂಡಲ್ ವುಡ್ ಜನಪ್ರಿಯ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್, ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದಾರೆ. ಕೆರೆ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮೊದಲಾದ ಚಟುವಟಿಕೆಗಳಲ್ಲಿ ಅವರು ಭಾಗಿಯಾಗಿದ್ದಾರೆ.

ಅವರು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ನೀರಿನ ಸಮಸ್ಯೆ ಬಗ್ಗೆ ತಿಳಿದಿದ್ದಾರೆ. ಮೊದಲಿಗೆ ತಮ್ಮ ಯಶೋ ಮಾರ್ಗ ಸಂಸ್ಥೆಯ ಮೂಲಕ ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಿದ್ದ ಅವರು ಶಾಶ್ವತ ಪರಿಹಾರ ರೂಪಿಸುವ ಉದ್ದೇಶದಿಂದ ಯೋಜನೆ ರೂಪಿಸಿದ್ದರು.

ತಮ್ಮ ತಂಡದೊಂದಿಗೆ ತಲ್ಲೂರು ಕೆರೆಯನ್ನು ಅಭಿವೃದ್ಧಿಪಡಿಸುವ ಯೋಜನೆ ಕೈಗೊಂಡರು. ಹೂಳು ತೆಗೆದ ಬಳಿಕ ಯಶ್ ಮತ್ತು ತಂಡದ ಪ್ರಯತ್ನದ ಫಲವಾಗಿ ಆಟದ ಮೈದಾನವಾಗಿದ್ದ ತಲ್ಲೂರು ಕೆರೆ ಭರ್ತಿಯಾಗಿದೆ. ನೀರು ತುಂಬಿಕೊಂಡು ಸುತ್ತಲೂ ಹಸಿರಿನಿಂದ ನಳನಳಿಸುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗಿದೆ.

ಉತ್ತರ ಕರ್ನಾಟಕದಲ್ಲಿ ದುಡಿಯುವ ವರ್ಗದ ಜನರಿದ್ದಾರೆ. ಅಲ್ಲಿನ ನೆಲ ತರಕಾರಿ ಮೊದಲಾದ ಬೆಳೆಗಳನ್ನು ಬೆಳೆಯಲು ಪೂರಕವಾಗಿದೆ. ನೀರಿನ ಸಮಸ್ಯೆಯಿಂದ ಜನ ಗುಳೆಹೋಗುವಂತಾಗಿದೆ. ಕೆರೆಗಳು ಒತ್ತುವರಿಯಾಗಿ, ಹೂಳು ತುಂಬಿಕೊಂಡಿವೆ. ಸಾಮೂಹಿಕ ಪ್ರಯತ್ನದ ಮೂಲಕ ಕೆರೆಗಳನ್ನು ಅಭಿವೃದ್ಧಿಪಡಿಸಿದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಕೆಲವು ಜಿಲ್ಲೆಗಳಲ್ಲಿ ಶುಷ್ಕವಾದ ವಾತಾವರಣ ಇದೆ. ಗಿಡಗಳನ್ನು ನೆಟ್ಟು ಪೋಷಿಸಿದಲ್ಲಿ ಮುಂದೆ ಅನುಕೂಲವಾಗಲಿದೆ. ಇದಕ್ಕೆ ಎಲ್ಲರ ಸಹಭಾಗಿತ್ವದ ಅಗತ್ಯ. ಸಾಮೂಹಿಕ ಪ್ರಯತ್ನದಿಂದ ಏನಾದರೂ ಸಾಧ್ಯವಿದೆ ಎನ್ನುತ್ತಾರೆ ಯಶ್.

ಮುಂದಿನ ದಿನಗಳಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುವುದು. ತಮ್ಮ ಸುತ್ತಲಿನ ಕೆರೆ, ಪರಿಸರ ಉಳಿಸಲು ತಿಳಿಸಲಾಗುವುದು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...