alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ನಟನ ಜೊತೆಗಿದ್ದ ಯುವತಿಯ ಗುಟ್ಟು ಬಯಲು

ನವಾಜುದ್ದೀನ್​ ಸಿದ್ದಿಕಿ, ಬಾಲಿವುಡ್​​ನ ಸ್ಟಾರ್​ ನಟ. ನಿರ್ದೇಶಕ ನೀಡಿದ ಪಾತ್ರಕ್ಕೆ ಜೀವತುಂಬುವ ಕಲಾವಿದ. ನವಾಜುದ್ದೀನ್ ಸಿದ್ದಿಕಿ ಸಾಮಾಜಿಕ ಜಾಲತಾಣದಿಂದ ಕೊಂಚ ದೂರ ಇದ್ದಾರೆ. ಆದ್ರೆ, ಇನ್ಸ್ಟಾಗ್ರಾಮ್​​ನಲ್ಲಿ ಇತ್ತೀಚಿಗೆ ನವಾಜುದ್ದೀನ್ ಹಾಕಿದ ಒಂದು ಫೋಟೋ ಸದ್ದು ಮಾಡ್ತಾ ಇದೆ.

ಸದ್ಯ ನವಾಜುದ್ದೀನ್ ರಜೆಯ ಮಜೆಯಲ್ಲಿದ್ದಾರೆ. ರೋಮ್​​ನಲ್ಲಿ ಸಖತ್​ ಎಂಜಾಯ್​ ಮಾಡ್ತಾ ಇದ್ದಾರೆ. ಈ ವೇಳೆ ಸ್ಥಳೀಯ ಸುಂದರಿಯೊಂದಿಗೆ ತೆಗೆಸಿಕೊಂಡ ಫೋಟೋವನ್ನು ಇನ್ಸ್ಟಾಗ್ರಾಮ್​​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಫೋಟೋ ಕೆಳಗೆ ಈ ಯುವತಿ ನನ್ನ ರೋಮ್ ರೋಮ್​​ ಗಳಲ್ಲಿ ಇದ್ದಾಳೆ (ಏ ಲಡ್ಕಿ ಮೇರೆ ರೋಮ್​ ರೋಮ್​ ಮೇ ಹೇ) ಎಂದು ಬರೆದಿದ್ದಾರೆ.

ಈ ಫೋಟೋ ನೋಡಿದ ಅಭಿಮಾನಿಗಳು ಸಿದ್ದಿಕಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಕೆಲವು ಅಭಿಮಾನಿಗಳು ನಿಮ್ಮ ಗರ್ಲ್​ಫ್ರೆಂಡಾ ಅಂತಾ ಕೇಳಿದ್ದಾರೆ. ನವಾಜುದ್ದೀನ್​ ಸಿದ್ದಿಕಿ ಈ ಬಗ್ಗೆ ತುಟಿ ಬಿಚ್ಚಿಲ್ಲ.

ಈ ಎಲ್ಲಾ ಊಹಾಪೋಹಗಳಿಗೆ ತರುಣ್ ಆದರ್ಶ್ ತೆರೆ ಎಳೆದಿದ್ದಾರೆ. ನವಾಜುದ್ದೀನ್ ಜೊತೆಗಿರುವ ಯುವತಿ, ಇಟಾಲಿಯನ್ ನಟಿ ವ್ಯಾಲೆಂಟೀನಾ ಕೋರ್ಟಿ ಎಂದು ತರುಣ್ ಹೇಳಿದ್ದಾರೆ. ಇವರಿಬ್ಬರೂ ತನಿಷ್ಟಾ ಮುಖರ್ಜಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ತರುಣ್ ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...