alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರಾಟಕ್ಕಿದೆ ರಾಜ್ ಕಪೂರ್ ಅವರ ಕನಸಿನ ಸ್ಟುಡಿಯೋ

ಹಿಂದಿ ಚಿತ್ರರಂಗದ ಷೋ ಮ್ಯಾನ್ ರಾಜ್ ಕಪೂರ್ ಅವರ ಕನಸಿನ ಕೂಸಾದ ಆರ್.ಕೆ. ಸ್ಟುಡಿಯೋ ಮಾರಾಟಕ್ಕಿದೆ ಅನ್ನೋ ಶಾಕಿಂಗ್ ವಿಚಾರವನ್ನು ರಾಜ್ ಕಪೂರ್ ಪುತ್ರ ರಿಷಿ ಕಪೂರ್ ತಿಳಿಸಿದ್ದಾರೆ. ಆರ್.ಕೆ. ಸ್ಟುಡಿಯೋದ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದ್ದು ನಷ್ಟ ಸಂಭವಿಸುತ್ತಿರುವ ಪರಿಣಾಮ ಅದನ್ನು ಮಾರಾಟ ಮಾಡೋದಕ್ಕೆ ನಿರ್ಧರಿಸಿಲಾಗಿದೆಯಂತೆ. ಈಗಾಗ್ಲೇ ಮಧ್ಯವರ್ತಿಗಳ ಮೂಲಕ ಸ್ಟುಡಿಯೋ ಮಾರಾಟದ ಮಾತುಕತೆಯೂ ನಡೆಯುತ್ತಿದೆಯಂತೆ.

1948ರಲ್ಲಿ ರಾಜ್ ಕಪೂರ್ ಆರ್.ಕೆ. ಸ್ಟುಡಿಯೋವನ್ನು ಸ್ಥಾಪಿಸಿದರು. 2017ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಅಗ್ನಿ ಆಕಸ್ಮಿಕದಿಂದಾಗಿ ಆರ್.ಕೆ. ಸ್ಟುಡಿಯೋಗೆ ಬಹುತೇಕ ಹಾನಿಯಾಯ್ತು. ಸದ್ಯಕ್ಕೆ ಕೆಲವು ಜಾಹೀರಾತು, ಧಾರಾವಾಹಿ ಮತ್ತು ಸಿನಿಮಾ ಚಿತ್ರೀಕರಣಕ್ಕೆ ಆರ್.ಕೆ. ಸ್ಟುಡಿಯೋ ಬಳಕೆಯಾಗುತ್ತಿದೆ. ಅಗ್ನಿ ಅವಘಡ ಸಂಭವಿಸೋದಕ್ಕೆ ಮೊದಲಿನಿಂದಲೂ ಆರ್.ಕೆ. ಸ್ಟುಡಿಯೋದ ನಿರ್ವಹಣೆ ನಮಗೆ ಬಿಳಿ ಆನೆಯನ್ನ ಸಾಕಿದ ಹಾಗಾಗ್ತಿತ್ತು ಎಂದಿದ್ದಾರೆ ರಿಷಿ ಕಪೂರ್.

ಆರ್.ಕೆ. ಸ್ಟುಡಿಯೋ ಅನ್ನೋ ಹೆಸರಿನ ಜೊತೆ ನಮ್ಮ ಎಮೋಷನ್ಸ್ ಇದೆ. ಆದ್ರೆ ವಾಸ್ತವ ಸ್ಥಿತಿಯನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇಂದಿಗೂ ಆರ್.ಕೆ. ಸ್ಟುಡಿಯೋದ ಜೊತೆಗೆ ಹಿಂದಿ ಚಿತ್ರರಂಗದ ಇತಿಹಾಸ ಮತ್ತು ಹೆಮ್ಮೆ ಬೆರೆತಿದೆ. ಆದ್ರೆ ಸದ್ಯ ಆರ್.ಕೆ. ಸ್ಟುಡಿಯೋ ಜನಪ್ರಿಯತೆ ಕಳೆದುಕೊಂಡಿದೆ. ರಾಜ್ ಕಪೂರ್ ಮಕ್ಕಳಾಗಿ ನನ್ನ ಸೋದರ, ಸೋದರಿಯರೆಲ್ಲಾ ಇಂದು ಚೆನ್ನಾಗಿಯೇ ಇದ್ದೇವೆ. ಆದ್ರೆ ಭವಿಷ್ಯದ ತಲೆಮಾರು ನಮ್ಮಂತೆಯೇ ಇರುತ್ತದೆ ಅನ್ನೋದನ್ನ ನಾವು ಹೇಳೋದಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ ನಾವೆಲ್ಲಾ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದೇವೆ ಅಂತಿದ್ದಾರೆ ರಿಷಿ ಕಪೂರ್.

ಇನ್ನು ಆರ್.ಕೆ. ಸ್ಟುಡಿಯೋವನ್ನು ರಣ್ಬೀರ್ ಕಪೂರ್ ಕೊಂಡುಕೊಳ್ತಾರೆ ಅನ್ನೋ ಸುದ್ದಿ ಕೂಡ ಓಡಾಡ್ತಿದೆ. ಈ ಬಗ್ಗೆ ಸ್ಪಷ್ಟಣೆ ನೀಡಿರುವ ರಿಷಿ ಕಪೂರ್ ರಣ್ಬೀರ್ ಬಳಿ ಅಷ್ಟು ದುಡ್ಡಿದ್ದರೆ ಅವನು ಕೊಂಡುಕೊಳ್ಳಲಿ. ಆದ್ರೆ ಅದು ಆಗದಿರುವ ಮಾತು. ಯಾಕಂದ್ರೆ ಅವನು ಸದ್ಯ ಸಂಜು ಸಿನಿಮಾದ ನಂತರ ಕೆರಿಯರ್ ನತ್ತ ಹೆಚ್ಚು ಗಮನ ಹರಿಸಿ ಕೆಲಸ ಮಾಡ್ತಿದ್ದಾನೆ ಎಂದಿದ್ದಾರೆ ರಿಷಿ ಕಪೂರ್. ಹಿಂದಿ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಅನೇಕ ಸಿನಿಮಾಗಳಿಗೆ ಯಶೋಗಾಥೆ ಇರುವ ಆರ್.ಕೆ. ಸ್ಟುಡಿಯೋ ಪರರ ಸ್ವತ್ತಾಗ್ತಿದೆ ಅನ್ನೋದು ಕಪೂರ್ ಕುಟುಂಬಕ್ಕೆ ಕೊಂಚ ನೋವಿನ ಸಂಗತಿಯೇ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...