alex Certify
ಕನ್ನಡ ದುನಿಯಾ       Mobile App
       

Kannada Duniya

4 ತಿಂಗಳಿನಿಂದ ನಾಪತ್ತೆಯಾಗಿದ್ದಾನೆ ಈ ನಟ

‘ದಿ ಕಪಿಲ್ ಶರ್ಮಾ’ ಶೋನಲ್ಲಿ ಸೆಲ್ಫಿ ಮೌಸಿ ಪಾತ್ರ ಮಾಡಿದ್ದ ನಟ ಸಿದ್ಧಾರ್ಥ್ ಸಾಗರ್ 4 ತಿಂಗಳುಗಳಿಂದ ನಾಪತ್ತೆಯಾಗಿದ್ದಾರೆ. ಆದ್ರೆ ಈಗ ವಿಷಯ ಬೆಳಕಿಗೆ ಬಂದಿದೆ. ಸಿದ್ದಾರ್ಥ್ ಸ್ನೇಹಿತೆ ಸೋಮಿ ಸಕ್ಸೇನಾ ಎಂಬಾಕೆ ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

ಸಿದ್ಧಾರ್ಥ್ ನನ್ನು ಪತ್ತೆ ಮಾಡಲು ಸಹಾಯ ಮಾಡಿ ಅಂತಾ ಕೇಳಿದ್ದಾಳೆ. ಕಾಮಿಡಿ ಸರ್ಕಸ್, ಛೋಟೆ ಮಿಯಾ ಬಡೆ ಮಿಯಾ, ಕಾಮಿಡಿ ಸರ್ಕಸ್ ಕೆ ಅಜೂಬೆ, ಕಪಿಲ್ ಶರ್ಮಾ ಶೋ ಸೇರಿದಂತೆ ಹಲವು ಕಾಮಿಡಿ ಶೋಗಳಲ್ಲಿ ಸಿದ್ದಾರ್ಥ್ ಅಭಿನಯಿಸಿದ್ದರು.

2017ರ ನವೆಂಬರ್ 18ರಂದು ಸಿದ್ದಾರ್ಥ್ ಕಾಣೆಯಾಗಿದ್ದಾರಂತೆ. ಆತನ ಮೊಬೈಲ್ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ, ಸಿದ್ದಾರ್ಥ್ ಪೋಷಕರ ಬಗ್ಗೆಯೂ ಯಾವುದೇ ಸುಳಿವು ದೊರೆತಿಲ್ಲ. ಸಿದ್ದಾರ್ಥ್ ತಾಯಿಯೇ ಈ ಕೃತ್ಯದ ಹಿಂದಿದ್ದಾಳೆ ಅಂತಾ ಆತನ ಸ್ನೇಹಿತರು ಅನುಮಾನಿಸಿದ್ದಾರೆ.

ಯಾಕಂದ್ರೆ ತಾಯಿ-ಮಗನ ಬಾಂಧವ್ಯ ಅಷ್ಟಕ್ಕಷ್ಟೆ ಎಂಬಂತಿತ್ತು. ಹಾಸ್ಯ ನಟಿ ಭಾರ್ತಿ ಸಿಂಗ್ ಗೆ ಒಮ್ಮೆ ಸಿದ್ದಾರ್ಥ್ ಕಪಾಳ ಮೋಕ್ಷ ಮಾಡಿದ್ದರು. ಈ ಘಟನೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...