alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಶ್ನೆ ಪತ್ರಿಕೆಯಲ್ಲೂ ಕಾಣಿಸಿಕೊಂಡ ದೀಪಿಕಾ….

INDIAN AIRFORCE DIPIKAದೀಪಿಕಾ ಪಡುಕೋಣೆ ಈಗ ಕ್ವೀನ್. ತಮ್ಮ ಅಭಿನಯದಿಂದ್ಲೇ ಬಾಲಿವುಡ್ ನಲ್ಲಿ ನಂ.1 ಪಟ್ಟ ಗಿಟ್ಟಿಸಿಕೊಂಡ ಸುಂದರಿ. ಈಗ ಹಾಲಿವುಡ್ ನಲ್ಲೂ ಮಿಂಚಲು ರೆಡಿಯಾಗಿದ್ದಾರೆ.

ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ದೀಪಿಕಾಗೆ ತಮ್ಮ ಮನಸ್ಸಿನಲ್ಲಿದ್ದಿದ್ದನ್ನು ನೇರವಾಗಿ ಹೇಳಬಲ್ಲ ಛಾತಿ ಇದೆ. ವಿಶೇಷ ಅಂದ್ರೆ ಬಹುಮುಖ ಪ್ರತಿಭೆ ದೀಪಿಕಾ ಪಡುಕೋಣೆ ಬಗ್ಗೆ ಭಾರತೀಯ ವಾಯುಪಡೆಯ ಪ್ರವೇಶ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದೆ. 2016ರಲ್ಲಿ ದೀಪಿಕಾ ಪಡುಕೋಣೆ ಅವರಿಗೆ ಯಾವ ಚಿತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ ನೀಡಲಾಗಿದೆ? ಅಂತಾ ಕೇಳಲಾಗಿತ್ತು. ಇಷ್ಟು ದಿನ ಅಭಿಮಾನಿಗಳ ಮನಸಲ್ಲಿ, ಕನಸಲ್ಲಿ ಕಾಡ್ತಾ ಇದ್ದ ಗುಳಿಕೆನ್ನೆ ಬೆಡಗಿ ಈಗ ಪ್ರಶ್ನೆ ಪತ್ರಿಕೆಯಲ್ಲೂ ಕಾಣಿಸಿಕೊಂಡಿದ್ದಾರೆ.

ಪ್ರದೀಪ್ ಎಂಬಾತ ಪ್ರಶ್ನೆಪತ್ರಿಕೆ ಸಮೇತ ಟ್ವಿಟ್ಟರ್ ನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿದ್ದಾನೆ. ವಾಯುಪಡೆ ಪ್ರವೇಶ ಪರೀಕ್ಷೆಯಲ್ಲಿ ತಮ್ಮ ಬಗ್ಗೆ ಪ್ರಶ್ನೆ ಕೇಳಿದ್ದನ್ನು ದೀಪಿಕಾ ಕೂಡ ಗಮನಿಸುತ್ತಾರೆಂದು ಭಾವಿಸಿದ್ದೇನೆ ಅಂತಾ ಪ್ರದೀಪ್ ಬರೆದುಕೊಂಡಿದ್ದಾನೆ. ಅದೇನೇ ಆದ್ರೂ ಎಂಟ್ರೆನ್ಸ್ ಎಕ್ಸಾಮ್ ಒಂದರಲ್ಲಿ ಬಾಲಿವುಡ್ ತಾರೆಯ ಬಗ್ಗೆ ಪ್ರಶ್ನೆ ಕೇಳಿರುವುದು ನಿಜಕ್ಕೂ ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...