alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಬಾರಿ ಅಮ್ಮನಾಗಲಿರುವ ಕಂಗನಾ

ಬಾಲಿವುಡ್ ನಟಿ ಕಂಗನಾ ಈವರೆಗೆ ಹಾಟ್ ಹಾಗೂ ಪವರ್ ಫುಲ್ ಪಾತ್ರದಲ್ಲಿ ಮಿಂಚಿದ್ದಾಳೆ. ಈಗ ತಾಯಿ ಪಾತ್ರಕ್ಕೆ  ಕಂಗನಾ ಬಣ್ಣ ಹಚ್ಚಲಿದ್ದಾಳೆನ್ನಲಾಗ್ತಿದೆ. ಸದ್ಯ ಕಂಗನಾ ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಮೆಂಟಲ್ ಹೇ ಕ್ಯಾ ಚಿತ್ರದಲ್ಲೂ ಕಂಗನಾ ನಟಿಸುತ್ತಿದ್ದಾಳೆ. ಇದ್ರ ಜೊತೆಗೆ ಕಂಗನಾ ಬರೇಲಿಕಿ ಬರ್ಫಿ ಚಿತ್ರದಲ್ಲಿ ನಟಿಸಲಿದ್ದಾಳಂತೆ.

ಬರೇಲಿ ಕಿ ಬರ್ಫಿ ಚಿತ್ರ ಕಬಡ್ಡಿ ಆಧಾರಿತ ಚಿತ್ರವಂತೆ. ಈ ಚಿತ್ರದಲ್ಲಿ ಕಂಗನಾ ಕಾಲೇಜು ಹುಡುಗಿಯಿಂದ ಹಿಡಿದು ಗೃಹಿಣಿ ಹಾಗೂ ತಾಯಿ ಪಾತ್ರದಲ್ಲಿ ಮಿಂಚಲಿದ್ದಾಳಂತೆ. ಒಂದು ವೇಳೆ ಅಂದುಕೊಂಡಂತೆ ಆದ್ರೆ ಕಂಗನಾ ಇದೇ ಮೊದಲ ಬಾರಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಂತಾಗುತ್ತದೆ.

ಸದ್ಯ ಕಂಗನಾ ಮೆಂಟಲ್ ಹೇ ಕ್ಯಾ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾಳೆ. ಶೀಘ್ರವೇ ಬರೇಲಿ ಕಿ ಬರ್ಫಿ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾಳಂತೆ. ಇದೊಂದು ಕಷ್ಟಕರ ಪಾತ್ರವಾಗಿದೆ. ಕ್ಯಾಮರಾ ಮುಂದೆ ದಿ ಬೆಸ್ಟ್ ನೀಡುವ ಕಂಗನಾ ಉತ್ತಮವಾಗಿ ನಟಿಸಲು ಎಲ್ಲ ತಯಾರಿ ಶುರು ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...