alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಜೊತೆ ಕ್ಯಾಮರಾದಲ್ಲಿ ಸೆರೆಯಾದ ಶಾಹಿದ್ ಕಪೂರ್

Shahid_Daughter

ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಪ್ಪನಾಗಿರುವ ಖುಷಿಯಲ್ಲಿದ್ದಾರೆ ಶಾಹಿದ್ ಕಪೂರ್. ಶಾಹಿದ್ ಅಭಿಮಾನಿಗಳು ನೆಚ್ಚಿನ ನಟನ ಮಗನನ್ನು ನೋಡಲು ಕಾತರರಾಗಿದ್ದಾರೆ. ಕೆಲ ಅಭಿಮಾನಿಗಳು ಆಸ್ಪತ್ರೆ ಮುಂದೆಯೇ ಜಮಾಯಿಸಿದ್ದರು. ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಲಿಲ್ಲ. ಆದ್ರೆ ಪೂರ್ತಿ ತೃಪ್ತಿಯೂ ಸಿಗಲಿಲ್ಲ.

ನಿನ್ನೆ ಶಾಹಿದ್ ಪತ್ನಿ ಮೀರಾ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಹಿಂದುಜಾ ಆಸ್ಪತ್ರೆಯಿಂದ ಶಾಹಿದ್ ಹೊರಗೆ ಬರ್ತಾ ಇದ್ದಂತೆ ಅಭಿಮಾನಿಗಳು ಫೋಟೋ ಹೊಡೆಯಲು ಯತ್ನಿಸಿದ್ದಾರೆ. ಮಗುವನ್ನು ಶಾಹಿದ್ ಎತ್ತಿಕೊಂಡಿದ್ದರು. ಹಾಗಾಗಿ ಮಗುವಿನ ಮುಖ ಅಭಿಮಾನಿಗಳಿಗೆ ಕಾಣಸಿಗಲಿಲ್ಲ. ಮಗುವಿನ ಫೋಟೋ ಹೊಡೆಯುವುದು ಶಾಹಿದ್ ಗೆ ಕೂಡ ಇಷ್ಟವಿರಲಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಶಾಹಿದ್ ಅಭಿಮಾನಿಗಳಿಗೆ ನಿರಾಶೆ ಮಾಡುವುದಿಲ್ಲ. ಆದಷ್ಟು ಬೇಗ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...