alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ನಿಷೇಧದಿಂದ ಸಂಕಷ್ಟದಲ್ಲಿ ‘ಸಿನಿ ದುನಿಯಾ’

telugu-film-industry-facing-severe-crisis-after-governments-demonetisation-move

ಇತ್ತೀಚೆಗಷ್ಟೆ ಬಿಡುಗಡೆಯಾದ ‘ರಾಕ್ ಆನ್-2’ ಚಿತ್ರ ಬಾಕ್ಸಾಫೀಸ್ ನಲ್ಲಿ ಸೋತಿದ್ದಕ್ಕೆ ನೋಟು ನಿಷೇಧವೇ ಕಾರಣ ಅಂತಾ ಚಿತ್ರತಂಡ ಹೇಳಿತ್ತು. ಕೇವಲ ರಾಕ್ ಆನ್ ಸಿನಿಮಾಕ್ಕೆ ಮಾತ್ರವಲ್ಲ ಇಡೀ ಚಿತ್ರರಂಗಕ್ಕೆ ನೋಟು ನಿಷೇಧದ ಬಿಸಿ ತಟ್ಟಿದೆ.

ತೆಲುಗಿನಲ್ಲಿ ಸಹ ಹಲವು ಸಿನಿಮಾಗಳ ಶೂಟಿಂಗ್ ಮತ್ತು ಬಿಡುಗಡೆಗೆ ಅಡ್ಡಿಯಾಗಿದೆ. ಅಲ್ಲಾರಿ ನರೇಶ್ ಅಭಿನಯದ ‘ಇಂಟ್ಲೋ ದೇಯಂ ನಾಕೇನ್ ಭಯಂ’, ರಾಮ್ ಚರಣ್ ತೇಜಾ ನಟನೆಯ ‘ಧ್ರುವ’ ಈ ವಾರ ಬಿಡುಗಡೆಯಾಗಬೇಕಿತ್ತು. ಆದ್ರೆ ಎಲ್ಲಾ ಕಡೆ ಸದ್ಯ ಆರ್ಥಿಕ ಸಮಸ್ಯೆ ಇರೋದ್ರಿಂದ ಸಿನಿಮಾ ಬಿಡುಗಡೆಯನ್ನು ಡಿಸೆಂಬರ್ ಗೆ ಮುಂದೂಡಲಾಗಿದೆ.

ಇನ್ನು 12 ಸಿನಿಮಾಗಳ ರಿಲೀಸ್ ದಿನಾಂಕ ಕೂಡ ಮುಂದಕ್ಕೆ ಹೋಗಿದೆ. ನೋಟು ನಿಷೇಧದ ಬಳಿಕ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಜನರು ಸಿನಿಮಾ ಮಂದಿರಗಳ ಕಡೆ ತಲೆ ಹಾಕ್ತಿಲ್ಲ, ಥಿಯೇಟರ್ ಗಳು ಖಾಲಿ ಹೊಡೆಯುತ್ತಿವೆ.

ಹಾಗಾಗಿ ಈ ಸಮಯದಲ್ಲಿ ಚಿತ್ರ ರಿಲೀಸ್ ಮಾಡಲು ನಿರ್ಮಾಪಕರು ಮತ್ತು ವಿತರಕರು ಹಿಂದೇಟು ಹಾಕ್ತಿದ್ದಾರೆ. ರಾಮನಾಯ್ಡು ಸ್ಟುಡಿಯೋಸ್, ರಾಮೋಜಿ ಫಿಲ್ಮ್ ಸಿಟಿ, ಅನ್ನಪೂರ್ಣ ಸ್ಟುಡಿಯೋಸ್, ಪದ್ಮಾಲಯ ಸ್ಟುಡಿಯೋಸ್ ಸೇರಿದಂತೆ ಹೈದ್ರಾಬಾದ್ ನ ಹಲವೆಡೆ ಚಿತ್ರೀಕರಣ ಸ್ಥಗಿತಗೊಂಡಿದೆ. ಕಿರಿಯ ಕಲಾವಿದರು ಮತ್ತು ಸಹಾಯಕರಿಗೆ ವೇತನ ಕೊಡುವುದು ಕಷ್ಟವಾಗಿರೋದ್ರಿಂದ ಎನ್.ಬಾಲಕೃಷ್ಣ ನಟನೆಯ ‘ಗೌತಮಿಪುತ್ರ ಸಾತಕರ್ಣಿ’ ಸಿನಿಮಾದ ಶೂಟಿಂಗ್ ಕೂಡ ಸ್ಥಗಿತವಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...