alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಚೇದನ ಪಡೆಯದೆ ಮತ್ತೊಂದು ಮದುವೆಯಾದ ಪತಿ ವಿರುದ್ದ ನಟಿಯಿಂದ ದೂರು

Marriage 4578ಈಗಾಗಲೇ ಮದುವೆಯಾಗಿ 14 ವರ್ಷದ ಮಗನಿದ್ದರೂ ಮತ್ತೊಂದು ಮದುವೆಯಾದ ತನ್ನ ಗಂಡನ ವಿರುದ್ದ ಚಿತ್ರ ನಟಿಯೊಬ್ಬರು ಹೈದರಾಬಾದ್ ನಗರ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದ್ದಾರೆ.

ತೆಲುಗು ಚಿತ್ರ ನಟಿ ಪೂಜಿತಾ ದೂರು ನೀಡಿದವರಾಗಿದ್ದು, 1994 ರಲ್ಲಿ ತಮ್ಮ ವಿವಾಹ ರಾಜಗೋಪಾಲ್ ಎಂಬವರೊಂದಿಗೆ ನೆರವೇರಿದ್ದು, ತಮಗೆ 14 ವರ್ಷದ ಮಗನೂ ಇದ್ದಾನೆ. ಇದೀಗ ರಾಜಗೋಪಾಲ್, ಮಹಿಳಾ ಐಎಎಸ್ ಅಧಿಕಾರಿಯೊಬ್ಬರ ಜೊತೆ ಮದುವೆಯಾಗಿದ್ದಾರೆಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ರಾಜಗೋಪಾಲ್ ಈ ಹಿಂದೆ ಹಲವರಿಂದ ಸಾಲ ಪಡೆದಿದ್ದು, ಸಾಲಗಾರರ ಒತ್ತಡ ಜಾಸ್ತಿಯಾದ ಹಿನ್ನಲೆಯಲ್ಲಿ ತಮ್ಮ ಆಭರಣಗಳನ್ನು ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದರು ಎಂದು ಆರೋಪಿಸಿರುವ ನಟಿ ಪೂಜಿತಾ, ತಮ್ಮಿಂದ ವಿವಾಹ ವಿಚ್ಚೇದನ ಪಡೆಯದೆ ಮತ್ತೊಂದು ಮದುವೆಯಾಗಿದ್ದಾರೆ. ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...