alex Certify
ಕನ್ನಡ ದುನಿಯಾ       Mobile App
       

Kannada Duniya

ಹಂದಿಮರಿ ಜೊತೆ ಎಟಿಎಂಗೆ ಬಂದ ನಟ….

ravi-babu-promotion-for-adhugo-with-piglet-at-atms

ಜನಸಾಮಾನ್ಯರು ಹಾಗಿರ್ಲಿ ಸಿನಿಮಾ ಮಂದಿ ಕೈಯ್ಯಲ್ಲೂ ಈಗ  ಹಣವಿಲ್ಲ. ಹಾಗಾಗಿ ನಟ-ನಟಿಯರು ಕೂಡ ಎಟಿಎಂ ಮುಂದೆ ಕ್ಯೂ ನಿಲ್ತಿದ್ದಾರೆ.

ತೆಲಗು ನಟ ಹಾಗೂ ನಿರ್ಮಾಪಕ ರವಿ ಬಾಬು ಕೂಡ ಹಣ ಡ್ರಾ ಮಾಡಿಕೊಳ್ಳಲು ಎಟಿಎಂಗೆ ಬಂದಿದ್ರು. ಅವರು ಒಬ್ಬರೇ ಬಂದ್ರೆ ಇಷ್ಟು ಸುದ್ದಿಯಾಗ್ತಿರಲಿಲ್ಲ, ಜೊತೆಗೆ ಬಿಳಿ ಬಣ್ಣದ ಮುದ್ದಾದ ಹಂದಿ ಮರಿಯನ್ನೂ ಕರೆತಂದಿದ್ರು. ಈ ಹಂದಿಮರಿ ಸದ್ಯದಲ್ಲೇ ತೆರೆಮೇಲೆ ಬರಲಿರುವ ರವಿಬಾಬು ಅವರ ‘Adhugu’ ಚಿತ್ರದ ಪ್ರಮುಖ ಆಕರ್ಷಣೆ.

ಇತ್ತೀಚೆಗೆ ನಾನು ಎಲ್ಲಿಗೆ ಹೋದ್ರೂ ಈ ಹಂದಿಮರಿಯನ್ನು ಜೊತೆಗೆ ಕೊಂಡೊಯ್ಯುತ್ತೇನೆ, ಯಾಕಂದ್ರೆ ಮನೆಯಲ್ಲಿ ಅದನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹಣ ಡ್ರಾ ಮಾಡಬೇಕಿತ್ತು, ಎಟಿಎಂಗೆ ಇದನ್ನೂ ಕರೆತಂದೆ. ಜನರೆಲ್ಲ ಸ್ವಲ್ಪ ಅಚ್ಚರಿಯಿಂದ ನನ್ನ ಕಡೆ ನೋಡಿದ್ರು. ಆದ್ರೆ ಯಾರೂ ಆಕ್ಷೇಪಿಸಲಿಲ್ಲ ಅಂತಾ ರವಿ ಬಾಬು ತಿಳಿಸಿದ್ದಾರೆ.

ಈ ಸಿನಿಮಾಕ್ಕಾಗಿಯೇ ರವಿ ಬಾಬು, ಅವರ ಸ್ನೇಹಿತರ ಫಾರ್ಮ್ ನಲ್ಲಿ ಕೆಲವು ಹಂದಿ ಮರಿಗಳನ್ನು ಬೆಳೆಸಿದ್ದಾರಂತೆ. ಸಿನಿಮಾದ ಬಹುಪಾಲನ್ನು ಈ ಹಂದಿಮರಿಗಳ ಜೊತೆ ಚಿತ್ರೀಕರಿಸಲಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾದಲ್ಲಿ ಹಂದಿ ಮರಿಗಳನ್ನು ಬಳಸಲಾಗಿದೆ ಅಂತಾ ರವಿ ಬಾಬು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...