alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನೆಮಾ ಟಿಕೆಟ್ ಬುಕ್ಕಿಂಗ್ ಗೆ ಸರ್ಕಾರದ ವೆಬ್ ಸೈಟ್

ತೆಲಂಗಾಣ ಸರ್ಕಾರ ಆನ್ ಲೈನ್ ಟಿಕೆಟ್ ಪೋರ್ಟಲ್ ಲಾಂಚ್ ಮಾಡಿದೆ. ಎಲ್ಲಾ ಸಿನೆಮಾ ಹಾಲ್ ಗಳ ಟಿಕೆಟ್ ಅನ್ನು ಒಂದೇ ಕಡೆ ಪ್ರೇಕ್ಷಕರು ಬುಕ್ಕಿಂಗ್ ಮಾಡಬಹುದು. ದೇಶದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರವೊಂದು ಅಧಿಕೃತ ಸಿನೆಮಾ ಟಿಕೆಟ್ ಬುಕ್ಕಿಂಗ್ ವೆಬ್ ಸೈಟ್ ಆರಂಭಿಸಿದೆ.

ತೆಲಂಗಾಣ ಫಿಲ್ಮ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ಈ ವೆಬ್ ಸೈಟ್ ನಿರ್ವಹಣೆ ಮಾಡಲಿದೆ. ಟಿಕೆಟ್ ಗಳ ಮಾರಾಟ ಮತ್ತು ತೆರಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಥಿಯೇಟರ್ ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳ ಆನ್ ಲೈನ್ ರಿಜಿಸ್ಟ್ರೇಶನ್ ಕೂಡ ಆರಂಭವಾಗಿದೆ.

ಸದ್ಯ ಪೋರ್ಟಲ್ ಗೆ ರಿಜಿಸ್ಟ್ರೇಶನ್ ಮಾಡಿಸುವುದು ಆಪ್ಷನಲ್. ಆದ್ರೆ ಸದ್ಯದಲ್ಲೇ ಇದನ್ನು ಸರ್ಕಾರ ಕಡ್ಡಾಯ ಮಾಡಲಿದೆ. ಕೌಂಟರ್ ಗಳಲ್ಲಿ ಟಿಕೆಟ್ ವಿತರಣೆ ನಿಲ್ಲಿಸಿ, ಕೇವಲ ಆನ್ ಲೈನ್ ಬುಕ್ಕಿಂಗ್ ಗೆ ಅವಕಾಶ ಮಾಡಿಕೊಡಬೇಕು ಅನ್ನೋದು ಸರ್ಕಾರದ ಉದ್ದೇಶ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...