alex Certify
ಕನ್ನಡ ದುನಿಯಾ       Mobile App
       

Kannada Duniya

ಎ.ಆರ್. ರೆಹಮಾನ್ ರ ‘ಜೈ ಹಿಂದ್’ ಹಾಡಿಗೆ ವೀಕ್ಷಕರು ಫುಲ್ ಫಿದಾ

2018ರ ಪುರುಷರ ಹಾಕಿ ವಿಶ್ವಕಪ್‌ ನವೆಂಬರ್ 28ರಿಂದ ಭುವನೇಶ್ವರದಲ್ಲಿ ಆರಂಭಗೊಳ್ಳಲು ಎಲ್ಲಾ ಸಿದ್ಧತೆ ನಡೆಯುತ್ತಿದೆ. ಭಾರತ ಆತಿಥ್ಯ ವಹಿಸಿರುವ ಈ ಕ್ರೀಡಾಕೂಟದಲ್ಲಿ ವಿಶ್ವದ ಅಗ್ರಗಣ್ಯ 16 ತಂಡಗಳು ಭಾಗವಹಿಸಲಿವೆ.

ಈ ಕ್ರೀಡಾಕೂಟದ ಪೂರ್ವಭಾವಿಯಾಗಿ ಜನರನ್ನು ಹುಚ್ಚೆಬ್ಬಿಸಲು ಅಧಿಕೃತ ಥೀಮ್ ಹಾಡಿನ ವಿಡಿಯೋ ತುಣುಕನ್ನು ಎ.ಆರ್. ರೆಹಮಾನ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ.

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಸಾಹಿತಿ ಗುಲ್ಝಾರ್ ಜತೆಗೆ ಸಹಭಾಗಿತ್ವದೊಂದಿಗೆ ಕ್ರೀಡಾಕೂಟದ ಥೀಮ್ ಹಾಡನ್ನು ಮಾಡುವುದಾಗಿ ಈ ಹಿಂದೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಕಟಿಸಿದ್ದರು.

ಶಾರುಖ್ ಖಾನ್ ಅಭಿನಯಿಸಿರುವ ಜೈ ಹಿಂದ್ ಇಂಡಿಯಾ ಹಾಡು ಮಧುರ ಸಂಗೀತದೊಂದಿಗೆ ಈಗಾಗಲೇ ಹಾಕಿ ಪ್ರಿಯರ ಮನಗೆದ್ದಿದೆ. ಈಗ ಬಂದಿದ್ದು ಟೀಸರ್ ಅಷ್ಟೇ. ಪೂರ್ಣ ತುಣುಕಿಗಾಗಿ ಇಡೀ ಭಾರತವನ್ನೇ ಕಾದು ಕುಳಿತುಕೊಳ್ಳುವಂತೆ ಮಾಡಿದ್ದಾರೆ ರೆಹಮಾನ್.

ಭುವನೇಶ್ವರದ ಕಳಿಂಗಾ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಎ.ಆರ್. ರೆಹಮಾನ ಲೈವ್ ಆಗಿ ಈ ಹಾಡು ಹಾಡಲಿದ್ದಾರೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಗುಂಪು ‘ಸಿ’ ಯಲ್ಲಿದ್ದು, ಬೆಲ್ಜಿಯಂ, ಕೆನಡಾ ಹಾಗೂ ದಕ್ಷಿಣ ಆಫ್ರಿಕಾದೊಂದಿಗೆ ಸೆಣಸಾಡಲಿದೆ. ನ.28ರ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ ಎದುರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...