alex Certify
ಕನ್ನಡ ದುನಿಯಾ       Mobile App
       

Kannada Duniya

‘ತಾರಕ್’ ದರ್ಶನಕ್ಕೆ ಮೊದಲ ದಿನವೇ ಶಾಕ್..!?

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಭರ್ಜರಿ’ ಸಿನಿಮಾ ರಿಲೀಸ್ ಆದ ಮೊದಲ ದಿನ ಮೊದಲ ಶೋ ವೇಳೆಯೇ ಕಿಡಿಗೇಡಿಯೊಬ್ಬ ಫೇಸ್ ಬುಕ್ ಲೈವ್ ನಲ್ಲಿ ದೃಶ್ಯಗಳನ್ನು ಹರಿಬಿಟ್ಟಿದ್ದು, ಭಾರೀ ಸುದ್ದಿಯಾಗಿತ್ತು.

ಇದೀಗ ಮತ್ತೆ ಪೈರಸಿ ಕಾಟ ಶುರುವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ತಾರಕ್’ ಸಿನಿಮಾದ ದೃಶ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.

ದರ್ಶನ್ ಎಂಟ್ರಿ ಸೀನ್ ಸೇರಿ 40 ಸೆಕೆಂಡ್ ಗಳ ಸೀನ್ ಹರಿಬಿಡಲಾಗಿದೆ. ರಗ್ಬಿ ಆಡುವ ದರ್ಶನ್ ದೃಶ್ಯಗಳು ವಿಡಿಯೋದಲ್ಲಿದ್ದು, ಚಿತ್ರಮಂದಿರದಲ್ಲಿ ವಿಡಿಯೋ ಮಾಡಲಾಗಿದೆ.

ಇದು ಗಮನಕ್ಕೆ ಬರುತ್ತಲೇ ದರ್ಶನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೆ ‘ಭರ್ಜರಿ’ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲೂ ಹೀಗೆ ಮಾಡಲಾಗಿತ್ತು. ಈಗ ‘ತಾರಕ್’ ಸಿನಿಮಾಗೂ ಇದೇ ರೀತಿ ಆಗಿದೆ. ಇಂತಹ ಕೃತ್ಯವೆಸಗಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ರಾಜ್ಯಾದ್ಯಂತ ‘ತಾರಕ್’ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದ್ದು, ಕೆಲವೆಡೆ ಬೆಳಿಗ್ಗೆಯಿಂದಲೇ ಪ್ರದರ್ಶನ ಆರಂಭವಾಗಿದೆ. ಮೊದಲ ಶೋ ವೇಳೆಯೇ ಕಿಡಿಗೇಡಿಯೊಬ್ಬ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...