alex Certify
ಕನ್ನಡ ದುನಿಯಾ       Mobile App
       

Kannada Duniya

ದರ್ಶನ್ ಅಭಿಮಾನಿಗಳಿಗೆ ಹಬ್ಬ ಶುರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ತಾರಕ್’ ಇದೇ ತಿಂಗಳಾಂತ್ಯಕ್ಕೆ ರಿಲೀಸ್ ಆಗಲಿದ್ದು, ದರ್ಶನ್ ಅಭಿಮಾನಿಗಳಿಗೆ ದಸರಾ ಹಬ್ಬದ ಸಂಭ್ರಮ ಇಮ್ಮಡಿಸಲಿದೆ.

‘ತಾರಕ್’ ಟೀಸರ್ ಅನ್ನು 1 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ದರ್ಶನ್ ಈ ಚಿತ್ರದಲ್ಲಿ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದು, ಟೀಸರ್ ನಲ್ಲಿ ಫೈಟ್, ಸಾಂಗ್ಸ್, ರಗ್ಬಿ ಆಟದ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿವೆ.

1 ನಿಮಿಷ 13 ಸೆಕೆಂಡ್ ನ ಟೀಸರ್ ನಲ್ಲಿ ದರ್ಶನ್ ಹೊಸ ಲುಕ್ ನಲ್ಲಿ ಮಿಂಚು ಹರಿಸಿದ್ದಾರೆ. ಸೆಪ್ಟಂಬರ್ 8 ರಂದು ಟೀಸರ್ ರಿಲೀಸ್ ಆಗಿತ್ತು.

ಸೆಪ್ಟಂಬರ್ 29 ರಂದು ಚಿತ್ರ ತೆರೆಗೆ ಬರಲು ರೆಡಿಯಾಗ್ತಿದೆ. ಪ್ರಕಾಶ್ ನಿರ್ದೇಶನ, ದುಷ್ಯಂತ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದ್ದು, ದೇವರಾಜ್, ಶಾನ್ವಿ ಶ್ರೀವಾಸ್ತವ್, ಶ್ರುತಿ ಹರಿಹರನ್ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಚಿತ್ರದ ಕುರಿತಾಗಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...