alex Certify
ಕನ್ನಡ ದುನಿಯಾ       Mobile App
       

Kannada Duniya

ತನುಶ್ರೀ-ನಾನಾ ಪಾಟೇಕರ್ ವಿವಾದದ ತನಿಖೆ ಮಾಡಲಿದೆ ಸಿಂಟಾ

ತನುಶ್ರೀ ದತ್ತಾ ಹಾಗೂ ನಾನಾ ಪಾಟೇಕರ್ ವಿವಾದದಲ್ಲಿ ಸಿನೆ ಆಂಡ್ ಟೆಲಿವಿಷನ್ ಆರ್ಟಿಸ್ಟ್ ಅಸೋಸಿಯೇಷನ್ (CINTAA) ಮಧ್ಯ ಪ್ರವೇಶ ಮಾಡಿದೆ. ಸಿಂಟಾ, ತನುಶ್ರೀ ಹಾಗೂ ನಾನಾ ಪಾಟೇಕರ್ ಅವ್ರಿಗೆ ಪತ್ರವೊಂದನ್ನು ಕಳುಹಿಸಿದೆ. ನಿಮ್ಮ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಸಿಂಟಾ ಬಯಸುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ತನುಶ್ರೀಗೆ ಪತ್ರ ಬರೆದಿರುವ ಸಿಂಟಾ, ನಿಮ್ಮ ಆತ್ಮ ಗೌರವವನ್ನು ಕಾಪಾಡುವುದು ನಮ್ಮ ಹಕ್ಕು. ಇದ್ರ ಬಗ್ಗೆ ಯಾವುದೇ ಸಂದೇಹ ಪಡಬೇಕಾಗಿಲ್ಲ. ನಿಮ್ಮ ದೂರನ್ನು ಆಲಿಸಲು ನಾವು ಬಯಸುತ್ತೇವೆ. ನಾನಾ ಪಾಟೇಕರ್ ಹಾಗೂ ನೀವು ಮುಖಾಮುಖಿಯಾಗಿ ಮಾತನಾಡಲು ಅವಕಾಶ ನೀಡುತ್ತೇವೆ. ನೀವು ಕೆಲ ವ್ಯಕ್ತಿಗಳನ್ನು ಮಧ್ಯಸ್ಥಿಕೆ ವಹಿಸಲು ಸೂಕ್ತರೆಂದು ಸೂಚಿಸಿದ್ದೀರಿ. ಅವ್ರ ಮುಂದೆಯೇ ಮಾತುಕತೆ ನಡೆಸುತ್ತೇವೆ. ಒಂದು ವೇಳೆ ಕೋರ್ಟ್  ಅಥವಾ ಪೊಲೀಸ್ ಮೊರೆ ಹೋಗಲು ನೀವು ಬಯಸಿದ್ರೆ ನಿಮಗೆ ನಾವು ಸಹಾಯ ಮಾಡುತ್ತೇವೆಂದು ಪತ್ರದಲ್ಲಿ ಹೇಳಲಾಗಿದೆ.

ಇದೇ ವೇಳೆ ನಾನಾ ಪಾಟೇಕರ್ ಅವ್ರಿಗೂ ಪತ್ರ ಬರೆಯಲಾಗಿದೆ. ತನುಶ್ರೀ ಹಾಗೂ ನಿಮ್ಮ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸಂಗತಿ ಬೇಸರ ತಂದಿದೆ. ನೀವು ನಮ್ಮ ಸಮಿತಿ ಸದಸ್ಯರು. ನೀವು ನಮ್ಮನ್ನು ಭೇಟಿಯಾಗಿ ನಿಮ್ಮ ಅಭಿಪ್ರಾಯ ಹೇಳಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

2008 ರಲ್ಲಿಯೇ ತನುಶ್ರೀ ಸೆಂಟಾಗೆ ದೂರು ನೀಡಿದ್ದರು. ಆದ್ರೆ ಆಗಿನ ಸದಸ್ಯರು ಬೇರೆಯಿದ್ದರು. ಈಗ ನಾವಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆಂದು ಪತ್ರದಲ್ಲಿ ಹೇಳಲಾಗಿದೆ. ತನುಶ್ರೀ ವಿವಾದದ ಬಗ್ಗೆ ನಾನಾ ಪಾಟೇಕರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಕೀಲರು ಮೌನವಾಗಿರುವಂತೆ ಹೇಳಿದ್ದಾರೆ. ಹಾಗಾಗಿ ಯಾವುದೇ ಪ್ರಶ್ನೆಗೆ ಉತ್ತರ ನೀಡುವುದಿಲ್ಲವೆಂದು ನಾನಾ ಪಾಟೇಕರ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...