alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತಾ ಸಂಭಾವಿತ ನಟನ ಮತ್ತೊಂದು ಮುಖ…?

ಬಾಲಿವುಡ್ ನ ಖ್ಯಾತ ನಟ ನಾನಾ ಪಾಟೇಕರ್, ಚಿತ್ರರಂಗದಲ್ಲಿ ಮಾತ್ರವಲ್ಲ ತಮ್ಮ ಸಾಮಾಜಿಕ ಕಳಕಳಿಯ ಕಾರಣಕ್ಕಾಗಿ ಬಹು ದೊಡ್ಡ ಹೆಸರು ಮಾಡಿದ್ದಾರೆ. ಇದೀಗ ಅಂತಹ ನಟನೆ ವಿರುದ್ಧ ನಟಿಯೊಬ್ಬಳು ಮಾಡಿರುವ ಆರೋಪ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದೆ.

ತನ್ನ ಬೋಲ್ಡ್ ನಟನೆಯಿಂದಲೇ ಖ್ಯಾತಿ ಪಡೆದಿದ್ದ ಹಾಟ್ ನಟಿ ತನುಶ್ರೀ ದತ್ತಾ, ನಟ ನಾನಾ ಪಾಟೇಕರ್ ನಟಿಯರೊಂದಿಗೆ ತೀರಾ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರಲ್ಲದೆ, 2008 ರಲ್ಲಿ ತಮ್ಮೊಂದಿಗೆ ಇದೇ ರೀತಿ ಅನುಚಿತವಾಗಿ ವರ್ತಿಸಿದ್ದರು ಎಂದು ಹೇಳಿದ್ದಾರೆ.

ಈಗಾಗಲೇ ತೆರೆಮರೆಯಿಂದ ಹಿಂದೆ ಸರಿದಿರುವ ನಟಿ ತನುಶ್ರೀ, ಇದೀಗ ಸಿಡಿಸಿರುವ ಹೊಸ ಬಾಂಬ್ ಬಾಲಿವುಡ್ ಚಿತ್ರರಂಗದಲ್ಲಿ ತಲ್ಲಣವನ್ನು ಸೃಷ್ಟಿಸಿದೆ. ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಕುರಿತು ದೊಡ್ಡ ಆಂದೋಲನವೇ ಆರಂಭವಾಗಿರುವ ಈ ಸಂದರ್ಭದಲ್ಲಿ, ನಟಿ ತನುಶ್ರೀ ನೀಡಿರುವ ಈ ಹೇಳಿಕೆಗೆ ನಾನಾ ಪಾಟೇಕರ್ ಯಾವ ಪ್ರತಿಕ್ರಿಯೆ ನೀಡುತ್ತಾರೆಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...