alex Certify
ಕನ್ನಡ ದುನಿಯಾ       Mobile App
       

Kannada Duniya

ಸೌಂದರ್ಯದ ರಹಸ್ಯ ಬಿಚ್ಚಿಟ್ಟ ‘ಬಾಹುಬಲಿ’ ಶಿವುಡು ಮನದನ್ನೆ

tamanna-bhatia14

ಸಿನೆಮಾ ರಂಗದಲ್ಲಿಯೇ ಸಂಚಲನ ಮೂಡಿಸಿದ್ದ ‘ಬಾಹುಬಲಿ’ಯಲ್ಲಿ, ಶಿವುಡು ಮನದನ್ನೆಯಾಗಿ ಕಾಣಿಸಿಕೊಂಡ ತಮನ್ನಾ ಮಿಲ್ಕಿಬ್ಯೂಟಿ ಎಂದೇ ಫೇಮಸ್. ಬೋರ್ಗರೆಯುವ ಜಲಪಾತ, ‘ಬಾಹುಬಲಿ’ಯಲ್ಲಿ ನಿಸರ್ಗ ರಮಣೀಯ ವೈಭವದ ದೃಶ್ಯಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವ ತಮನ್ನಾರನ್ನು ನೀವು ನೋಡಿರಬಹುದು.

ತಮಿಳು ಹಾಗೂ ತೆಲುಗು ಸಿನೆಮಾ ರಂಗದಲ್ಲಿ ತಮನ್ನಾ ಬಹುಬೇಡಿಕೆಯ ನಟಿಯಾಗಿದ್ದು, ಬಹುತೇಕ ಎಲ್ಲಾ ಸ್ಟಾರ್ ಗಳ ಜೊತೆಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಲಿನ ಬಣ್ಣವನ್ನೂ ನಾಚಿಸುವಂತಹ ಕಲರ್ ಹೊಂದಿರುವ ತಮನ್ನಾ ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಳ್ಳುತ್ತಾರೆ. ತಮನ್ನಾ ಸೌಂದರ್ಯಕ್ಕೆ ಪ್ರೇಕ್ಷಕರಂತೂ ಫಿದಾ ಆಗಿಬಿಡುತ್ತಾರೆ. ‘ಬಾಹುಬಲಿ’ಯಲ್ಲಿ ತಮನ್ನಾ ಅಭಿನಯ ಮನೋಜ್ಞವಾಗಿದೆ. ಅಭಿನಯ, ನೃತ್ಯದಲ್ಲಿ ತಮನ್ನಾ ನೋಡುಗರನ್ನು ಸೆಳೆಯುತ್ತಾರೆ.

ರಸಿಕರಲ್ಲಿ ಕಿಚ್ಚು ಹಚ್ಚುವ ನಟಿ ತಮನ್ನಾ ತಮ್ಮ ಸೌಂದರ್ಯದ ರಹಸ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಆಲೋವೆರಾ ಪೀಸ್ ಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ, ನಾನು ಪ್ರತಿಬಾರಿ ಚಿತ್ರೀಕರಣದ ಮುಗಿದ ನಂತರ ಆಲೋವೆರಾದಿಂದ ಸ್ಕಿನ್ ಮಸಾಜ್ ಮಾಡಿಕೊಳ್ಳುವೆ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...