alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬಕ್ಕೂ ಮುನ್ನ ವೈರಲ್ ಆಯ್ತು ತೈಮೂರ್ ವಿಡಿಯೋ

ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಮುದ್ದಿನ ಮಗ ತೈಮೂರ್ ಅಲಿ ಖಾನ್ ಡಿಸೆಂಬರ್ 20ರಂದು ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾನೆ. ಈ ದಿನವನ್ನು ವಿಶೇಷವಾಗಿ ಆಚರಿಸಲು ಖಾನ್ ಕುಟುಂಬ ಪಟೌಡಿ ತಲುಪಿದೆ. ಇದಕ್ಕೂ ಮುನ್ನ ತೈಮೂರ್ ಅಲಿ ಖಾನ್ ವಿಡಿಯೋವೊಂದು ವೈರಲ್ ಆಗಿದೆ.

ಇನ್ಸ್ಟ್ರಾಗ್ರಾಮ್ ನಲ್ಲಿ ಕರೀನಾ ಕಪೂರ್ ಖಾನ್ ಅಭಿಮಾನಿಗಳ ಪೇಜ್ ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ಈವರೆಗೆ ತೈಮೂರ್ ಫೋಟೋ ಮಾತ್ರ ಅಭಿಮಾನಿಗಳಿಗೆ ನೋಡಲು ಸಿಕ್ತಿತ್ತು. ಆದ್ರೀಗ ತೈಮೂರ್ ವಿಡಿಯೋ ನೋಡುವ ಅವಕಾಶ ಸಿಕ್ಕಿದೆ.

ಇನ್ನು ಮೂರೇ ದಿನದಲ್ಲಿ ತೈಮೂರ್ ಹುಟ್ಟುಹಬ್ಬವಿದೆ. ಬಾಲಿವುಡ್ ಸ್ಟಾರ್ ಕಿಡ್ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸುವ ಸಾಧ್ಯತೆ ದಟ್ಟವಾಗಿದೆ. ಅನೇಕ ದಿನಗಳಿಂದ ತೈಮೂರ್ ಹುಟ್ಟುಹಬ್ಬದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗ್ತಿದೆ. ತೈಮೂರ್ ಹುಟ್ಟುಹಬ್ಬವನ್ನು ಸರಳವಾಗಿ ಕುಟುಂಬಸ್ಥರ ಜೊತೆ ಆಚರಿಸುವುದಾಗಿ ಈ ಹಿಂದೆ ಕರೀಷ್ಮಾ ಕಪೂರ್ ಹೇಳಿದ್ದಳು. ಪಟೌಡಿ ಅರಮನೆಯಲ್ಲಿ ಹುಟ್ಟುಹಬ್ಬ ಆಚರಿಸಲು ಎಲ್ಲ ತಯಾರಿ ನಡೆದಿದೆ.

ಶನಿವಾರವೇ ಕರೀನಾ ಹಾಗೂ ಸೈಫ್ ಪಟೌಡಿಗೆ ತೆರಳಿದ್ದಾರೆ. ಹರ್ಯಾಣದ ಗುಡ್ಗಾಂವ್ ನ ಪಟೌಡಿ ಎಂಬಲ್ಲಿ ಸೈಫ್ ಪಟೌಡಿ ಅರಮನೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...