alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವನದ ರಹಸ್ಯ ಬಿಚ್ಚಿಟ್ಟ ರಜನಿಕಾಂತ್

ಚೆನ್ನೈ: ಡಿಸೆಂಬರ್ 31 ರಂದು ಹೊಸ ರಾಜಕೀಯ ಪಕ್ಷ ಘೋಷಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್, ಮರುದಿನ ಪಕ್ಷದ ವೆಬ್ ಸೈಟ್ ಲಾಂಚ್ ಮಾಡಿ ಸದಸ್ಯತ್ವ ಪಡೆಯಲು ತಿಳಿಸಿದ್ದರು.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಜೀವನದ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಾನು ಕೆಲ ಕಾಲ ಬೆಂಗಳೂರಿನಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾಗಿ ತಿಳಿಸಿದ್ದಾರೆ. ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ಮಾಡುತ್ತಿದ್ದೆ. ನಂತರದಲ್ಲಿ ಬಸ್ ಕಂಡಕ್ಟರ್ ಆಗಿದ್ದೆ. ಅಲ್ಲಿಂದ ಚಿತ್ರರಂಗಕ್ಕೆ ಪ್ರವೇಶಿಸಿದೆ. ಚಿತ್ರರಂಗಕ್ಕೆ ಬಂದ ನಂತರದಲ್ಲಿ ನನಗೆ ಪತ್ರಕರ್ತರ ಒಡನಾಟ ಮತ್ತೆ ಬೆಳೆಯಿತು ಎಂದು ತಿಳಿಸಿದ್ದಾರೆ.

ತಮಿಳುನಾಡು ಹಲವು ಕ್ರಾಂತಿಗಳು ನಡೆದ ನೆಲೆಯಾಗಿದೆ. ಇಲ್ಲಿಂದಲೇ ರಾಜಕೀಯ ಆರಂಭಿಸಿದ್ದೇನೆ. ಮುಂದೆಯೂ ಹೊಸ ಕ್ರಾಂತಿ ನಡೆಯುವ ವಿಶ್ವಾಸವಿದೆ. ಪಕ್ಷದ ಅಭ್ಯರ್ಥಿಗಳನ್ನು 234 ಕ್ಷೇತ್ರಗಳಲ್ಲಿ ಕಣಕ್ಕಿಳಿಸಲಾಗುವುದು ಎಂದು ಹೇಳಿದ್ದಾರೆ.

ಮುಂದಿನ ಪೀಳಿಗೆಗಾಗಿ ಹೊಸ ರಾಜಕೀಯ ಕ್ರಾಂತಿಯನ್ನು ಮಾಡಬೇಕಿದೆ. ಆಧ್ಯಾತ್ಮ, ರಾಜಕೀಯ ಬೇರೆಯಾದವು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ನಾನು ಮಾಧ್ಯಮಗಳಿಂದ ಸ್ವಲ್ಪ ದೂರವಿದ್ದೆ. ಈಗ ರಾಜಕೀಯ ಪ್ರವೇಶಿಸಿದ್ದೇನೆ. ಎಲ್ಲರ ಸಹಕಾರವನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...