alex Certify
ಕನ್ನಡ ದುನಿಯಾ       Mobile App
       

Kannada Duniya

ಗಳಿಕೆ ವಿಚಾರದಲ್ಲಿ ಬಾಹುಬಲಿ-2 ದಾಖಲೆ ಮುರಿಯುತ್ತಿದೆ ಈ ಚಿತ್ರ

ವಿಶ್ವದಾದ್ಯಂತ ಬಾಹುಬಲಿ-2 ಚಿತ್ರ ಸಾಕಷ್ಟು ದಾಖಲೆಗಳನ್ನು ಮಾಡಿದೆ. ಆದ್ರೆ ದಾಖಲೆಗಳ ಮೇಲೆ ದಾಖಲೆ ಬರೆದ ಚಿತ್ರಕ್ಕೆ ಭಾರತದ ಇನ್ನೊಂದು ಚಿತ್ರ ಟಕ್ಕರ್ ನೀಡ್ತಾಯಿದೆ. ಬಾಹುಬಲಿ-2 ದಾಖಲೆ ಮುರಿಯಲು ಮುಂದಾಗಿರುವ ಚಿತ್ರ ಬೇರೆ ಯಾವ್ದೂ ಅಲ್ಲ ಒಂದು ತಮಿಳಿನ ಚಿತ್ರವೆನ್ನುವುದು ವಿಶೇಷ.

ಯಸ್, ಸೂಪರ್ ಸ್ಟಾರ್ ಅಜಿತ್ ಅಭಿನಯದ ವಿವೇಗಂ, ಬಾಹುಬಲಿ-2 ದಾಖಲೆ ಸರಿಗಟ್ಟಲು ಮುಂದಾಗಿದೆ. ಚಿತ್ರ ಬಿಡುಗಡೆಯಾಗಿ 11 ದಿನ ಕಳೆದಿದೆ. ಅಷ್ಟರಲ್ಲೇ ಬಾಹುಬಲಿ ದಾಖಲೆಯನ್ನು ಮುರಿದಿದೆ. ವಿವೇಗಂ 11 ದಿನಗಳಲ್ಲಿ ವಿಶ್ವದಾದ್ಯಂತ 152 ಕೋಟಿ ಗಳಿಕೆ ಕಂಡಿದೆ.

ಆಶ್ಚರ್ಯದ ವಿಷ್ಯವೆಂದ್ರೆ ಚಿತ್ರ ಬಿಡುಗಡೆಯಾಗಿ 3-4 ದಿನದಲ್ಲಿಯೇ ಚಿತ್ರ 100 ಕೋಟಿ ಗಳಿಕೆ ಕಂಡಿತ್ತು. ಬಾಹುಬಲಿ ಚೆನ್ನೈನಲ್ಲಿ ಮೂರು ದಿನದಲ್ಲಿ 3.24 ಕೋಟಿ ಗಳಿಕೆ ಕಂಡಿತ್ತು. ವಿವೇಗಂ ಮೂರು ದಿನದಲ್ಲಿ 4.28 ಕೋಟಿ ಗಳಿಕೆ ಕಂಡಿದೆ.

ಬಾಹುಬಲಿ -2 ಚಿತ್ರ ಪ್ರಪಂಚದಾದ್ಯಂತ ಗಲ್ಲಾಪಟ್ಟಿಗೆಯನ್ನು ಕೊಳ್ಳೆ ಹೊಡೆದಿತ್ತು. ಚಿತ್ರ ಸಾವಿರಾರು ಕೋಟಿ ವ್ಯವಹಾರ ನಡೆಸಿದೆ. ಚಿತ್ರದ ನಂತ್ರ ಪ್ರಭಾಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ್ದು, ಈಗ ಸಾಹೋ ಚಿತ್ರದಲ್ಲಿ ನಟಿಸ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...