alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟಿಯರ ಶ್ರೀಮಂತಿಕೆ ಹಿಂದಿದ್ಯಾ ಸೆಕ್ಸ್ ರಾಕೆಟ್..!?

ಅಮೆರಿಕಾ ಪೊಲೀಸರು ಕೆಲ ದಿನಗಳ ಹಿಂದಷ್ಟೆ ಚಿಕಾಗೋದಲ್ಲಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ದಂಪತಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ಮಹತ್ವದ ವಿಷ್ಯಗಳು ಬಹಿರಂಗವಾಗ್ತಿವೆ. ತಮಿಳಿನ 5 ನಟಿಯರು ಈ ಸೆಕ್ಸ್ ರಾಕೆಟ್ ನಲ್ಲಿ ಭಾಗಿಯಾಗಿದ್ದಾರೆಂಬುದಕ್ಕೆ ಸಾಕ್ಷಿ ಸಿಕ್ಕಿದೆ.

ಅಮೆರಿಕಾ ತನಿಖಾ ಸಂಸ್ಥೆ ಇಲಿನಾಯ್ಸ್ ಜಿಲ್ಲಾ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದೆ. ಮಾಧ್ಯಮಗಳ ವರದಿ ಪ್ರಕಾರ, ಕೆಲ ನಟಿಯರಿಗೆ ಅನೇಕ ವರ್ಷಗಳಿಂದ ಸಿನಿಮಾದಲ್ಲಿ ಕೆಲಸ ಸಿಕ್ಕಿಲ್ಲ. ಆದ್ರೂ ಬ್ಯಾಂಕ್ ಬ್ಯಾಲೆನ್ಸ್ ನಿರಂತರವಾಗಿ ಏರ್ತಿದೆ. ನಟಿಯರು ಏಕಾಏಕಿ ಶ್ರೀಮಂತರಾಗ್ತಿರುವ ಹಿಂದೆ ಸೆಕ್ಸ್ ರಾಕೆಟ್ ಕೈ ಇದೆ ಎಂಬ ಅನುಮಾನ ದಟ್ಟವಾಗ್ತಿದೆ.

ಅಮೆರಿಕಾ ತನಿಖಾ ಸಂಸ್ಥೆ ಏಪ್ರಿಲ್ 29ರಂದು ಭಾರತೀಯ ಮೂಲದ ದಂಪತಿಯನ್ನು ಬಂಧಿಸಿತ್ತು. ದಂಪತಿ ತಮಿಳು ಹಾಗೂ ತೆಲುಗು ನಟಿಯರಿಗೆ ಮೋಸ ಮಾಡಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದಾರೆಂಬ ಆರೋಪವಿದೆ. ಚಿಕಾಗೋ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿ ಅವ್ರನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಲಾಗುತ್ತಿತ್ತಂತೆ. ಇಬ್ಬರು ನಟಿಯರು ಅಮೆರಿಕಾ ತನಿಖಾಧಿಕಾರಿಗಳ ಕೈಗೆ ಬೇರೆ ಬೇರೆ ಸಮಯದಲ್ಲಿ ಸಿಕ್ಕಿ ಬಿದ್ದಿದ್ದರು. ಆದ್ರೆ ಇಬ್ಬರೂ ರಾಜು ಎಂಬ ವ್ಯಕ್ತಿ ಹೆಸರು ಹೇಳಿದ್ದರು. ರಾಜು ವಿಚಾರಣೆ ವೇಳೆ ಕಿಶನ್ ಹಾಗೂ ಪತ್ನಿ ಚಂದ್ರಕಲಾ ಹೆಸರು ಬಹಿರಂಗಪಡಿಸಿದ್ದ. ತನಿಖೆ ವೇಳೆ ಇನ್ನೂ ಮೂವರು ನಟಿಯರ ಹೆಸರು ಬಹಿರಂಗವಾಗಿದೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಪ್ರಸಿದ್ಧ ನಟಿಯೊಬ್ಬಳ ಹೆಸರೂ ಈ ದಂಧೆಯಲ್ಲಿ ಕೇಳಿ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...