alex Certify
ಕನ್ನಡ ದುನಿಯಾ       Mobile App
       

Kannada Duniya

ಯಶ್ ‘ಕೆಜಿಎಫ್’ ಅಡ್ಡಾದಲ್ಲಿ ತಮನ್ನಾ ಮಿಂಚು

ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಸಿನಿಮಾದ ಸ್ಪೆಷಲ್ ಸಾಂಗ್ ನಲ್ಲಿ ಬಹುಭಾಷಾ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಹೆಜ್ಜೆ ಹಾಕ್ತಾರೆ ಅನ್ನೋ ವಿಚಾರ ಕೆಲದಿನಗಳ ಹಿಂದಷ್ಟೇ ಖಚಿತವಾಗಿತ್ತು.

ಕನ್ನಡದ ಪರೋಪಕಾರಿ ಸಿನಿಮಾದಲ್ಲಿ ಎಲ್.ಆರ್. ಈಶ್ವರಿ ಹಾಡಿರುವ ಜೋಕೆ ನಾನು ಬಳ್ಳಿಯ ಮಿಂಚು ಹಾಡಿಗೆ ತಮನ್ನಾ ಹೆಜ್ಜೆ ಹಾಕಲಿದ್ದಾರೆ ಅಂತ ಹೇಳಲಾಗ್ತಿತ್ತು. ಈಗ ಯಶ್ ಮತ್ತು ತಮನ್ನಾ ಅಭಿನಯದ ಈ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಒಂದು ಎಕ್ಸೈಟಿಂಗ್ ಸ್ಟಿಲ್ ನ್ನ ಚಿತ್ರತಂಡ ರಿವೀಲ್ ಮಾಡಿದೆ.

ತಮನ್ನಾ ಮತ್ತು ಯಶ್ ಅವರ ರೆಟ್ರೋ ಸ್ಟೈಲ್ ಲುಕ್, ಕಾಸ್ಟೂಮ್ಸ್ ತುಂಬಾನೇ ಆಕರ್ಷಣೀವಾಗಿದ್ದು ಯಶ್ ಅಭಿಮಾನಿಗಳು ಮತ್ತು ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಕುತೂಹಲವನ್ನ ಹೆಚ್ಚಿಸಿದೆ. ಹಾಡಿನ ಚಿತ್ರೀಕರಣದೊಂದಿಗೆ ಕೆಜಿಎಫ್ ಮೊದಲ ಭಾಗದ ಚಿತ್ರೀಕರಣ ಮುಗಿದಂತಾಗಿದೆ.

ಟಾಲಿವುಡ್ ನ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿರುವ ಈ ಸಾಂಗ್ನಲ್ಲಿ ತಮನ್ನಾ ಸೊಂಟ ಬಳುಕಿಸಿದ್ದಾರೆ. ಅಸಲಿ ಹಾಡನ್ನ ರೀಮಿಕ್ಸ್ ಮಾಡದೆ ಯಥಾವತ್ ಬಳಸಿಕೊಳ್ಳಲಾಗಿದೆ ಅಂತ ಚಿತ್ರ ತಂಡ ಹೇಳಿಕೊಂಡಿದೆ. ಕನ್ನಡ ಚಿತ್ರರಂಗದ ಗೋಲ್ಡನ್ ಹಿಟ್ಸ್ ಗಳಲ್ಲಿ ಒಂದಾಗಿರುವ ಗೀತೆ ಚಿತ್ರದ ಸನ್ನಿವೇಶಕ್ಕೆ ಹೇಳಿ ಮಾಡಿಸಿದಂತಿರುವ ಕಾರಣ ಹಾಡಿನಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಹಾಗೆ ಬಳಸಿಕೊಳ್ಳಲಾಗಿದೆ.

ಉಗ್ರಂ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರ ಎರಡನೇ ಸಿನಿಮಾ ಎರಡು ವರ್ಷಗಳಿಂದ ಚಿತ್ರೀಕರಣವಾಗ್ತಿದೆ. 80ರ ದಶಕದ ಸಿನಿಮಾಗಾಗಿ ವಿಶೇಷ ಸೆಟ್ನೊಂದಿಗೆ ಚಿತ್ರೀಕರಿಸಲಾಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ತೆರೆಗೆ ಬರುತ್ತಿರುವ ಕೆಜಿಎಫ್ ಸಿನಿಮಾದ ಟ್ರೇಲರ್ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಮಾಡೋದಾಗಿ ಈಗಾಗ್ಲೇ ಚಿತ್ರತಂಡ ಘೋಷಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...