alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ 3’ ರ ನಿರೀಕ್ಷೆಯಲ್ಲಿದ್ದವರಿಗೆ ಬ್ಯಾಡ್ ನ್ಯೂಸ್

ಮಿಲ್ಕಿ ಬ್ಯೂಟಿ ತಮನ್ನಾ ಬಾಹುಬಲಿ ನಂತರ ಮತ್ತೊಂದು ಐತಿಹಾಸಿಕ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಸೈರಾ ನರಸಿಂಹಾ ರೆಡ್ಡಿ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿಯವರಿಗೆ ಜೋಡಿಯಾಗಿ ತಮನ್ನಾ ಆಕ್ಟ್ ಮಾಡ್ತಿದ್ದಾರೆ.

ಬೆಂಗಳೂರಿನ ಖಾಸಗಿ ಸಮಾರಂಭವೊಂದಕ್ಕೆ ಆಗಮಿಸಿದ್ದ ತಮನ್ನಾ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸ್ತಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವಾಗ ಪಾತ್ರದ ಹಿನ್ನಲೆ ಅರಿಯದೆ ಆ ಘಟನೆಯ ಬಗ್ಗೆ ಅಧ್ಯಯನ ಮಾಡದೆ ಅಭಿನಯಿಸೋದು ಸಾಧ್ಯವೇ ಇಲ್ಲ ಎಂದಿದ್ದಾರೆ.

ಇದೇ ಸಮಯದಲ್ಲಿ ತಮನ್ನಾ, ಬಾಹುಬಲಿ ಬಗ್ಗೆಯೂ ಮಾತನಾಡಿದ್ದಾರೆ. ಬಾಹುಬಲಿ ಅತ್ಯದ್ಭುತ ಕಾಲ್ಪನಿಕ ಸಿನಿಮಾ. ಬಾಹುಬಲಿ ಸಿನಿಮಾ ನಿರ್ಮಾಣ ಹಂತದಲ್ಲೇ ಅದು ಕೇವಲ ಎರಡು ಭಾಗಗಳಿಗೆ ಸೀಮಿತವಾಗಬೇಕು ಅನ್ನೋದು ನಿರ್ಧಾರವಾಗಿತ್ತು. ಚಿತ್ರ ಯಶಸ್ವಿಯಾಯ್ತು ಅನ್ನೋ ಕಾರಣಕ್ಕೆ ಬಲವಂತವಾಗಿ ಮೂರನೇ ಭಾಗ ಮಾಡೋದಕ್ಕೆ ಸಾಧ್ಯವಾಗೋದಿಲ್ಲ. ಎರಡು ಭಾಗಕ್ಕೆ ಬಾಹುಬಲಿ ಸೀಮಿತವಾಗಿದ್ದು, ನನಗೂ ಖುಷಿ ತಂದಿದೆ ಎಂದಿದ್ದಾರೆ.

ಇನ್ನು ಭಾರತ ಚಿತ್ರರಂಗದ ಮಾಸ್ಟರ್ ಪೀಸ್ ಸಿನಿಮಾ ಅಂತಾನೇ ಗುರುತಿಸಲಾಗುವ ಮೊಘಲ್ – ಎ- ಆಜಾಮ್ ಚಿತ್ರ ತಮ್ಮ ನೆಚ್ಚಿನ ಐತಿಹಾಸಿಕ ಸಿನಿಮಾ ಎಂದಿದ್ದಾರೆ ಸೌತ್ ಸಿನಿ ದುನಿಯಾದ ಸ್ಟಾರ್ ಹಿರೋಯಿನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...