alex Certify
ಕನ್ನಡ ದುನಿಯಾ       Mobile App
       

Kannada Duniya

ಕೆ.ಜಿ.ಎಫ್. ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಿಲ್ಕಿ ಬ್ಯೂಟಿ

ಯಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಕೆ.ಜಿ.ಎಫ್. ಚಿತ್ರ ತಂಡದಿಂದ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಹೊರ ಬಿದ್ದಿದೆ. ಕನ್ನಡ ಸಿನಿಮಾದಲ್ಲಿ ಮತ್ತೊಮ್ಮೆ ಬಹುಭಾಷಾ ನಟಿ ಕಾಣಿಸಿಕೊಳ್ಳಲಿದ್ದಾರೆ. ಹಾಗಿದ್ರೆ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ಯಾರು ಎಂಬ ಕುತೂಹಲ ಇದೆಯಾ ಈ ವರದಿ ನೋಡಿ.

ರಾಕಿಂಗ್ ಸ್ಟಾರ್ ಯಶ್ ನಟನೆಯ ಚಿತ್ರದಲ್ಲಿ ಬಹುಭಾಷಾ ನಟಿ ತಮನ್ನಾ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ ಟ್ವಿಟರ್ ನಲ್ಲಿ ಖಚಿತಪಡಿಸಿದ್ದಾರೆ. ತಮನ್ನಾ ಬಾಹುಬಲಿ ಚಿತ್ರದಲ್ಲಿ ಅಮೋಘ ನಟನೆ ಮಾಡಿ ಎಲ್ಲರ ಮನ ಗೆದ್ದಿದ್ದರು.

ಅಸಲಿಗೆ ತಮನ್ನಾ ಯಾವ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಕೇಳಿದ್ರೆ, ನಿಮಗೆ ಅರಿವು ಇಲ್ಲದೆ ನಿಮ್ಮ ಕಾಲುಗಳು ಹೆಜ್ಜೆ ಹಾಕಲು ಆರಂಭಿಸುತ್ತವೆ. 1970 ರಲ್ಲಿ ಬೆಳ್ಳಿತೆರೆಯಲ್ಲಿ ಹವಾ ಕ್ರಿಯೇಟ್ ಮಾಡಿದ್ದ ಪರೋಪಕಾರಿ ಚಿತ್ರದ `ಜೋಕೆ ನಾನು ಬಳ್ಳಿಯ ಮಿಂಚು’. ಎಲ್. ಆರ್. ಈಶ್ವರಿ ಕಂಠದಲ್ಲಿ ಮೂಡಿಬಂದ ಈ ಹಾಡಿಗೆ ಹೊಸ ಟಚ್ ನೀಡಲಾಗಿದೆ. ಈ ಹಾಡು ಕೆ.ಜಿ.ಎಫ್ ಚಿತ್ರದಲ್ಲಿ ರಿ-ಕ್ರಿಯೇಟ್ ಆಗುತ್ತಿದೆ.

ಈ ಮೊದಲು ಈ ಹಾಡಿಗೆ ಹೆಜ್ಜೆ ಹಾಕಲು ನಾಲ್ಕು ನಾಯಕಿಯರ ಹೆಸರು ಕೇಳಿಬಂದಿತ್ತು. ಈಗ ತಮನ್ನಾ ಹೆಸರು ಅಂತಿಮವಾಗಿದ್ದು, ಕನ್ನಡ ಅಭಿಮಾನಿಗಳು ತಮನ್ನಾರ ಡ್ಯಾನ್ಸ್ ನೋಡಲು ಕಾತುರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...