alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲೇ ಡೇಟ್ ನಲ್ಲಿ ಕರೀನಾ-ತುಷಾರ್ ಮಕ್ಕಳು

ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಮಗ ತೈಮೂರ್ ಸದಾ ಸುದ್ದಿಯಲ್ಲಿರ್ತಾನೆ. ತೈಮೂರ್ ಎಲ್ಲೆ ಹೋದ್ರು ಆತನ ಕ್ಯೂಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ತೈಮೂರ್ ತಾಯಿ ಕರೀನಾ, ಮಗನ ಮುದ್ದು ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುತ್ತಿರುತ್ತಾರೆ. ಆದ್ರೆ ಈ ಬಾರಿ ತೈಮೂರ್ ಫೋಟೋವನ್ನು ಕರೀನಾ ಸ್ನೇಹಿತ ತುಷಾರ್ ಕಪೂರ್ ಪೋಸ್ಟ್ ಮಾಡಿದ್ದಾರೆ.

ತೈಮೂರ್ ಜೊತೆ ತುಷಾರ್ ಕಪೂರ್ ಮಗ ಲಕ್ಷ್ಯ ಕೂಡ ಫೋಟೋದಲ್ಲಿದ್ದಾನೆ. ಇಬ್ಬರೂ ಆಟವಾಡ್ತಿರುವ ಫೋಟೋ ಇದಾಗಿದೆ. ತೈಮೂರ್ ಹಾಗೂ ಲಕ್ಷ್ಯ ಜೊತೆ ಇನ್ನೊಬ್ಬ ಸ್ನೇಹಿತನೂ ಪ್ಲೇಡೇಟ್ ನಲ್ಲಿದ್ದಾನೆ.

ತುಷಾರ್ ಕಪೂರ್ ಬಾಡಿಗೆ ತಾಯಿ ಮೂಲಕ ಅಪ್ಪನಾಗಿದ್ದಾರೆ. ಮಗನಿಗೆ ಲಕ್ಷ್ಯ ಎಂದು ಹೆಸರಿಟ್ಟಿದ್ದಾರೆ ತುಷಾರ್. ಕರೀನಾ ಹಾಗೂ ತುಷಾರ್ ಒಳ್ಳೆ ಸ್ನೇಹಿತರು. ಹಾಗೆ ತೈಮೂರ್ ಹಾಗೂ ಲಕ್ಷ್ಯ ಕೂಡ ಒಂದೇ ವಯಸ್ಸಿನವರು. ಕರೀನಾ ಗರ್ಭಿಣಿ ಎಂಬ ವಿಷಯ ತಿಳಿದಾಗಲೇ ತುಂಬಾ ಸಂತೋಷ ವ್ಯಕ್ತಪಡಿಸಿದ್ದ ತುಷಾರ್ ನಮ್ಮಿಬ್ಬರು ಮಕ್ಕಳು ಒಂದೇ ಶಾಲೆಯಲ್ಲಿ ಓದುತ್ತಾರೆ. ನಮ್ಮಂತೆ ನಮ್ಮ ಮಕ್ಕಳು ಒಳ್ಳೆ ಸ್ನೇಹಿತರಾಗ್ತಾರೆಂದಿದ್ದರು.

ಸದ್ಯ ಕರೀನಾ ಕಪೂರ್ ‘ವೀರ್ ದಿ ವೆಡ್ಡಿಂಗ್’ ಶೂಟಿಂಗ್ ನಲ್ಲಿ ಬ್ಯುಸಿಯಿದ್ರೆ ತೈಮೂರ್ ಸ್ನೇಹಿತರ ಜೊತೆ ಆಟವಾಡ್ತಿದ್ದಾನೆ.  ಕೆಲ ದಿನಗಳ ಹಿಂದಷ್ಟೇ ತುಷಾರ್ ಮಗನ ಬರ್ತ್ ಡೇಯನ್ನು ಅದ್ಧೂರಿಯಾಗಿ ಮಾಡಿದ್ದರು. ಅಲ್ಲಿಯೂ ತೈಮೂರ್ ಮಿಂಚಿದ್ದು ಸುಳ್ಳಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...