alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ನಟನ ಸಾವಿನ ಹಿಂದಿನ ‘ಶಾಕಿಂಗ್’ ಸಂಗತಿ ಬಿಚ್ಚಿಟ್ಟ ವೈದ್ಯರು

ಜನಪ್ರಿಯ ಟಿ ವಿ ಧಾರಾವಾಹಿ ‘ತಾರಕ್ ಮೆಹತಾ ಕಾ ಉಲ್ಟಾ ಚಸ್ಮಾ’ದ ಡಾಕ್ಟರ್ ಹಾಥಿ ಪಾತ್ರಧಾರಿ ಕವಿಕುಮಾರ್ ಆಜಾದ್ ಅಕಾಲಿಕ ಮರಣವನ್ನಪ್ಪಿದ್ದಾರೆ. ಅವರ ಸಾವಿಗೆ ಎಲ್ಲರೂ ಕಣ್ಣೀರು ಮಿಡಿಯುತ್ತಿರುವಾಗಲೇ ವೈದ್ಯರೊಬ್ಬರು ಆಜಾದ್ ಸಾವಿನ ಹಿಂದಿನ ಕಠೋರ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.

ವೈದ್ಯ ಮುಫಿ ಲೋಖಂಡ್ವಾಲಾ ಮಾಧ್ಯಮವೊಂದರ ಸಂದರ್ಶನದಲ್ಲಿ ಈ ವಿಚಾರ ತಿಳಿಸಿದ್ದು, ಆಜಾದ್ ಸಾವಿಗೆ ಅವರ ಅತಿಯಾದ ತೂಕವೇ ಕಾರಣವೆಂದು ಹೇಳಿದ್ದಾರೆ. ಈ ಹಿಂದೆ 265 ಕೆ.ಜಿ. ತೂಕವಿದ್ದ ಕವಿಕುಮಾರ್ ಆಜಾದ್ ಚಿತ್ರೀಕರಣದ ಸೆಟ್ ನಲ್ಲಿಯೇ ಪ್ರಜ್ಞೆತಪ್ಪಿ ಬಿದ್ದಿದ್ದರು. ಆ ಬಳಿಕ ತಮ್ಮ ಬಳಿ ಚಿಕಿತ್ಸೆಗೆ ಬಂದಿದ್ದು, ಬೇರಿಯಾಟ್ರಿಕ್ ಸರ್ಜರಿ ಮೂಲಕ ಅವರ ತೂಕವನ್ನು 140 ಕೆ.ಜಿ.ಗೆ ಇಳಿಸಲಾಗಿತ್ತು ಎಂದಿದ್ದಾರೆ.

ನಂತರ ಕವಿಕುಮಾರ್ ಅಜಾದ್ ಎಂದಿನಂತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಇದರ ಮಧ್ಯೆ ಅವರ ತೂಕ ಮತ್ತೆ ಏರಿಕೆಯಾಗುತ್ತಾ ಸಾಗಿದ್ದು, ಆಗ ತೂಕ ಇಳಿಕೆಯಾಗದಿದ್ದಲ್ಲಿ ಆರೋಗ್ಯಕ್ಕೆ ತೊಂದರೆ ಎಂದು ತಾವು ಆಜಾದ್ ಅವರಿಗೆ ಎಚ್ಚರಿಸಿದ್ದಾಗಿ ಲೋಖಂಡ್ವಾಲಾ ತಿಳಿಸಿದ್ದಾರೆ.

ಆದರೆ ತಮ್ಮ ಶರೀರದ ಆಕಾರ ಹಾಗೂ ಅಭಿನಯದ ಕಾರಣಕ್ಕಾಗಿ ಜನಪ್ರಿಯರಾಗಿದ್ದ ಕವಿಕುಮಾರ್ ಅಜಾದ್, ತೂಕ ಇಳಿಸಿಕೊಂಡರೆ ಚಿತ್ರರಂಗದಲ್ಲಿ ತಮಗೆ ಅವಕಾಶ ಕೈ ತಪ್ಪಬಹುದು ಎಂದು ಆತಂಕಗೊಂಡಿದ್ದರು. ಇದು ಅವರ ಆರೋಗ್ಯಕ್ಕೆ ಮುಳುವಾಗಿ ಅಂತಿಮವಾಗಿ ದುರಂತ ಸಾವನ್ನಪ್ಪಬೇಕಾಯಿತು ಎಂದು ವೈದ್ಯರು ಮರುಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...