alex Certify
ಕನ್ನಡ ದುನಿಯಾ       Mobile App
       

Kannada Duniya

ಹೃದಯಾಘಾತದಿಂದ ಕೊನೆಯುಸಿರೆಳೆದ ಟಿವಿ ಕಲಾವಿದ

ಟಿವಿ ಧಾರವಾಹಿ `ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ’ದಲ್ಲಿ ವೈದ್ಯರ ಪಾತ್ರ ನಿಭಾಯಿಸುತ್ತಿದ್ದ ಕವಿ ಕುಮಾರ್ ಆಜಾದ್ ಇನ್ನಿಲ್ಲ. ಕವಿ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೃದಯಾಘಾತವಾಗ್ತಿದ್ದಂತೆ ಕವಿ ಕುಮಾರ್ ಅವ್ರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕವಿ ಕುಮಾರ್ ಆಜಾದ್ ಸಾವನ್ನಪ್ಪಿದ್ದಾರೆ.

ಉಲ್ಟಾ ಚಸ್ಮಾ ಎಪಿಸೋಡ್ ಆರಂಭದಿಂದಲೂ ಕವಿ ಕುಮಾರ್ ಆಜಾದ್ ವೈದ್ಯರ ಪಾತ್ರ ನಿಭಾಯಿಸುತ್ತಿದ್ದರು. ಕವಿ ಕುಮಾರ್ ನಿಧನದ ಸುದ್ದಿ ಬರ್ತಿದ್ದಂತೆ ಉಲ್ಟಾ ಚಸ್ಮಾ ಶೋದ ಶೂಟಿಂಗ್ ನಿಲ್ಲಿಸಲಾಗಿದೆ. ತಂಡ ಅವ್ರ ಆತ್ಮಕ್ಕೆ ಶಾಂತಿಕೋರಿದೆ. ಇಂದು ಬೆಳಿಗ್ಗೆ ನಿರ್ದೇಶಕರಿಗೆ ಕರೆ ಮಾಡಿ ಅನಾರೋಗ್ಯದ ಹಿನ್ನೆಲೆಯಲ್ಲಿ ಶೂಟಿಂಗ್ ಗೆ ಬರ್ತಿಲ್ಲ ಎಂದಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅನೇಕ ಬಾರಿ ಅವ್ರು ಶೂಟಿಂಗ್ ಗೆ ಗೈರಾಗಿದ್ದರಂತೆ.

ಟಿವಿ ಶೋ ಜೊತೆ ಬಾಲಿವುಡ್ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. 2000 ರಲ್ಲಿ ಬಂದ ಮೇಲಾ ಚಿತ್ರದಲ್ಲಿ ಅವ್ರು ನಟಿಸಿದ್ದರು. ಉಲ್ಟಾ ಚಸ್ಮಾ 2500 ಎಪಿಸೋಡ್ ಪೂರ್ಣಗೊಳಿಸಿದ್ದು, ಸುಮಾರು 10 ವರ್ಷಗಳಿಂದ ಕವಿಕುಮಾರ್ ಇಲ್ಲಿಯೇ ಕೆಲಸ ಮಾಡ್ತಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...